ಅಜಿತ್ ಜಯರಾಜ್ ನನ್ನ ತಂದೆಯ ವಿಷಯದಲ್ಲಿ ಏನ್ ಬೇಕಾದ್ರೂ ಮಾಡಬಹುದು ಅಂದುಕೊAಡವರನ್ನು ಸುಮ್ಮನೆ ಬಿಡಲ್ಲ ಅಂತ ಸಿಡಿದೆದ್ದಿದ್ದಾರೆ. ಸದ್ಯ ಹೆಡ್ ಬುಷ್ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರದ ಬಗ್ಗೆ ಜಯರಾಜ್ ಪುತ್ರ ಅಜಿತ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದು ನನ್ನ ತಂದೆಯ ಪ್ರೆöÊವಸಿಯ ವಿಚಾರ. ನನ್ನ ತಂದೆಯ ಬಗ್ಗೆ ಸಿನಿಮಾ ಮಾಡ್ತಾರೆ ಅಂದಾಗ ಕುಟುಂಬದವರ ಜೊತೆ ಮಾತಾಡಿ ಅವರಿಂದ ಒಂದು ಒಪ್ಪಿಗೆ ತೊಗೋಬೇಕು ಅನ್ನೋದು ಇಲ್ವಾ..? ಅಂತ ಪ್ರಶ್ನೆ ಮಾಡ್ತಿದ್ದಾರೆ ಅಜಿತ್.
ಈ ಘಟನೆಯಲ್ಲಿ ಮೂಡ್ತಿರೋ ಪ್ರಶ್ನೆಗಳು ಎರಡು, ಒಂದು ಸಿನಿಮಾ ರಿಲೀಸ್ ವೇಳೆಯಲ್ಲಿ ಇದನ್ನು ಪ್ರಚಾರಕ್ಕಾಗಿ ಚಿತ್ರತಂಡ ಅಜಿತ್‌ರಿಂದ ಮಾಡಿಸುತ್ತಿದೆ. ಇನ್ನೊಂದು ಸ್ವತಃ ಅಜಿತ್ ಬ್ಲಾö್ಯಕ್‌ಮೇಲ್ ಮಾಡುವ ಮೂಲಕ ಚಿತ್ರತಂಡದಿAದ ಹಣವನ್ನು ಡಿಮಾಂಡ್ ಮಾಡೋಕೆ ಈ ಪ್ಲಾö್ಯನ್ ಹಾಕಿದ್ದಾರೆ ಅನ್ನೋದು.
ಆದರೆ ಇದಕ್ಕೆ ಕರ್ನಾಟಕ ಟಿವಿ ಮೂಲಕ ಕ್ಲಾö್ಯರಿಟಿ ಕೊಟ್ಟಿರುವ ಜಯರಾಜ್ ಪುತ್ರ ಅಜಿತ್, ಧನಂಜಯ್ ನನ್ನ ಸ್ನೇಹಿತ, ಸಿನಿಮಾ ಆರಂಭ ಆದಾಗ ನಾನು ಧನಂಜಯ್‌ಗೆ ವಿಶ್ ಮಾಡಿದ್ದೀನಿ. ನನ್ನ ಅವರ ಸಂಬAಧ ಚೆನ್ನಾಗಿದೆ. ಆದರೆ ಚಿತ್ರತಂಡದವರು ಈ ಸಿನಿಮಾದಲ್ಲಿ ನನ್ನ ತಂದೆಯವರ ಪಾತ್ರದ ಬಗ್ಗೆ ಹೇಳಿ ಅಂದ್ರೆ ಪ್ರತಿಕ್ರಿಯಿಸುತ್ತಿಲ್ಲ. ಮಗನಾಗಿ ತಂದೆಯ ಸ್ವಾಭಿಮಾನ ಕಳೆಯೋಕೆ ನಾನು ಬಿಡಲ್ಲ. ನನ್ನ ತಾಯಿಗೋಸ್ಕರ ನಾನು ಇದನ್ನು ಮಾಡ್ತೀನಿ. ನನ್ನ ಹಿಂದೆ ಕಾನದ ಕೈ ಇದೆ ಅಂತಿದ್ದಾರೆ, ಯಾವ ಕೈಗಳೂ ಇಲ್ಲ, ಇದ್ದರೆ ಅದು ನನ್ನ ತಾಯಿ.
ಇಲ್ಲೀವರೆಗೂ ನನ್ನ ತಂದೆಯ ವಿಷಯ ಬಂದಾಗ ನಾವು ಸುಮ್ಮನೇ ಇದ್ವಿ, ಆದ್ರೆ ಈಗ ಒಂದೊAದಕ್ಕೂ ಉತ್ತರ ಕೊಡ್ತಾ ರ‍್ತಾ ಇದ್ದೀನಿ. ಅಗ್ನಿ ಶ್ರೀಧರ್ ನನ್ನನ್ನು ಚೆನ್ನಾಗಿ ನೋಡ್ಕೊಂಡಿದ್ದಾರೆ. ಧನಂಜಯ್ ನನ್ನ ಫ್ರೆಂಡ್ ಹಾಗಂತ ನನ್ನ ತಂದೆಯ ಬಗ್ಗೆ ನನಗಿರೋ ಹಕ್ಕನ್ನು ಯಾರೂ ಕಿತ್ತುಕೊಳ್ಳೋ ಹಾಗಿಲ್ಲ ಅನ್ನೋದು ಅಜಿತ್ ಅವರ ಸ್ಪಷ್ಟ ನಿರ್ಧಾರ. ಸಿನಿಮಾ ರಿಲೀಸ್ ಆಗ್ಬರ‍್ದು ಅಂತ ನಾನೇನು ಹೊರಟಿಲ್ಲ, ಆದ್ರೆ ನನಗೆ ಅನ್ಯಾಯ ಆದ್ರೆ ನಾನು ಕಾನೂನು ಹೋರಾಟ ಮಾಡೋಕೂ ರೆಡಿ ಅಂದಿದ್ದಾರೆ ಜಯರಾಜ್ ಪುತ್ರ. ಈ ವಿಷಯವಾಗಿ ಸಂಪೂರ್ಣ ಸಂದರ್ಶನವನ್ನು ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಿ..
ಓಂ,
ಕರ್ನಾಟಕ ಟಿವಿ