Friday, July 11, 2025

Latest Posts

ಕೆಜಿಎಫ್ ಅಡ್ಡಕ್ಕೆ ಬಂದೇ ಬಿಟ್ರು ಸಂಜುಬಾಬಾ! ರಾಕಿಭಾಯ್ ಎದುರು ಅಧೀರನ ಅಬ್ಬರ!

- Advertisement -

ಕೆಜಿಎಫ್ ಮೊದಲ ಭಾಗ ಮಾಡಿರೋ ಮೋಡಿಗೆ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ -೨ ನೋಡೋದಿಕ್ಕೆ ಸಖತ್ ಎಕ್ಸೈಟ್ ಆಗಿದ್ದಾರೆ. ರಾಕಿಭಾಯ್ ರಾಕಿ ಗೆಟಪ್ ಗೆ ಫಿದಾ ಆಗಿರೋ ಅಭಿಮಾನಿಗಳು ಯಾವಾಗಾ ಕೆಜಿಎಫ್-೨ ಬರುತ್ತೇ ಅಂತಾ ಕಾತುರದಿಂದ ಕಾಯ್ತಾ ಇದ್ದಾರೆ. ಇದರ ನಡುವೆಯೇ ಸಿನಿಮಾ ತಂಡ ಕೆಜಿಎಫ್ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿತ್ತು. ಅಧೀರನಾಗಿ ಅಬ್ಬರಿಸಲು ಬಿಟೌನ್ ಸ್ಟಾರ್ ಸಂಜಯ್ ದತ್ ಬರ್ತಾರೆ ಅಂತಾ ಹೇಳಿತ್ತು. ಅದರಂತೆ ಅಧೀರನ ಫಸ್ಟ್ ಲುಕ್ ಕೂಡ ಈಗಾಗ್ಲೇ ರಿವೀಲ್ ಆಗಿದೆ.

ಈಗ ಹೊಸ ವಿಷ್ಯ ಏನಪ್ಪ ಅಂದ್ರೆ, ಕೆಜಿಎಫ್ ಚಾಪ್ಟರ್-೨ ಅಖಾಡಕ್ಕೆ ಸಂಜು ಬಾಬಾ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯಿಂದ ಹೈದ್ರಾಬಾದ್ ನಲ್ಲಿ ಅಧೀರ ಭಾಗದ ಶೂಟಿಂಗ್ ನಡೆಯುತ್ತಿದೆ. ಬರೋಬ್ಬರಿ ೧೦ ದಿನಗಳ ಕಾಲ ಹೈದ್ರಾಬಾದ್ ನಲ್ಲಿ ಸಂಜಯ್ ದತ್ ಅಧೀರನ‌ ಗೆಟಪ್ ಶೂಟಿಂಗ್ ನಡೆಯಲಿದೆ. ಈಗಾಗ್ಲೇ ೯೦% ರಷ್ಟು ಕೆಜಿಎಫ್ ಶೂಟಿಂಗ್ ಕಂಪ್ಲೀಟ್ ಆಗಿದೆ ಎನ್ನಲಾಗ್ತಿದೆ. ಹಾಗಿದ್ರೆ ಮುಂದಿನ ವರ್ಷದ ಎಪ್ರಿಲ್ ನಲ್ಲಿ ಕೆಜಿಎಫ್ ಚಾಪ್ಟರ್ ಸಿನಿಮಾ ರಿಲೀಸ್ ಆಗಲಿದೆ ಅನ್ನೋ‌ ಮಾಹಿತಿ ಸದ್ಯ ಗಾಂಧಿನಗರದಲ್ಲಿ ಹಬ್ಬಿದೆ.


ಅಂದಹಾಗೇ ಕೆಜಿಎಫ್ ನಲ್ಲಿ ಸಂಜಯ್ ದತ್ ವಿಲನ್ ರೋಲ್ ಪ್ಲೇ ಮಾಡಲಿದ್ದಾರೆ. ಬಾಲಿವುಡ್‌ನ ಅಗ್ನಿಪಥ್ ಸಿನಿಮಾದಂತಹ ಲುಕ್ ನಲ್ಲಿ ಸಂಜು ಬಾಬಾ ಮಿಂಚಲಿದ್ದಾರೆ ಎನ್ನಲಾಗ್ತಿದೆ.

- Advertisement -

Latest Posts

Don't Miss