ಕನ್ನಡದ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಸದ್ಯ ಭಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಎಲ್ಲರ ನಿರೀಕ್ಷೆಯಂತೆಯೇ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಮೊದಲ ದಿನವೇ ೧೩೪ಕೋಟಿ ಗಳಿಸಿ ವಿಶ್ವದಾದ್ಯಂತ ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಷ್ಟೇ ಅಲ್ಲ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ನ ನೋಡಿ ಇಡೀ ವಿಶ್ವವೇ ಶಾಕ್ ಆಗಿದೆ. ಅದೆಷ್ಟೇ ದೊಡ್ಡ ಸಿನಿಮಾ ಆದ್ರೂ ಮೊದಲ ದಿನಕ್ಕಿಂದ ಎರಡನೇ ದಿನದ ಬಾಕ್ಸಾಫೀಸ್ ಗಳಿಕೆ ಕೊಂಚ ಕಡಿಮೆಯೇ ಇರುತ್ತದೆ. ಆದರೆ ಕೆಜಿಎಫ್-೨ ಸಿನಿಮಾದ ಎರಡನೇಯ ದಿನದ ಕಲೆಕ್ಷನ್ ಮೊತ್ತವೂ ಮೊದಲ ದಿನದ ಕಲೆಕ್ಷನ್‌ಗೇನೂಕಮ್ಮೀ ಇರೋದಿಲ್ಲ ಅಂತಿದೆ ಕೆಲ ರಿಪೋರ್ಟ್ಸ್. ಹೌದು, ಎರಡನೇ ದಿನ ಕನ್ನಡಕ್ಕಿಂತ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ರಾಕಿಭಾಯ್ ಹವಾ ಹೆಚ್ಚಾಗಿದ್ದು, ಹೀಗಾಗಿ ಕನ್ನಡ, ತೆಲುಗು ಹಾಗೂ ಹಿಂದಿ ¨ಬಾಕ್ಸಾಫೀಸ್ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ಬಾಲಿವುಡ್‌ನ ಖ್ಯಾತ ಟ್ರೇಡ್ ಅನಲಿಸ್ಟ್ ಟ್ವೀಟ್ ಮಾಡಿರೋ ಪ್ರಕಾರ ಕೆಜಿಎಫ್-೨ ಸಿನಿಮಾ ಹಿಂದಿ ಭಾಷೆಯಲ್ಲಿ ಎರಡನೆಯ ದಿನ ೪೫ಕೋಟಿ ನೆಟ್ ಕಲೆಕ್ಷನ್ ಆಗಿದೆ ಎಂದು ತಿಳಿಸಿದ್ದಾರೆ. ಹಾಗಾದ್ರೆ ಮೊದಲ ದಿನ ಕೆಜಿಎಫ್-೨ ಹಿಂದಿಯಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಿತ್ತು ಅನ್ನೋದಾದ್ರೆ ೫೨.೯೫ಕೋಟಿ ಗಳಿಸಿತ್ತು. ವಿಶ್ವದಾದ್ಯಂತ ಕೆಜಿಎಫ್-೨ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಒಂದು ಅಂದಾಜಿನ ಪ್ರಕಾರ ಎರಡೂ ದಿನದ ಗಳಿಕೆ ಸುಮಾರು ೨೩೦ಕೋಟಿ ಆಗಬಹುದು ಎಂಬುದು ಸಿನಿವಿಮರ್ಷಕರ ಅಭಿಫ್ರಾಯ. ಈ ಬಗ್ಗೆ ಚಿತ್ರತಂಡದಿAದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಕರ್ನಾಟಕ ನ್ಯೂಸ್..