Sunday, April 20, 2025

Latest Posts

 ನವೆಂಬರ್‌ನಲ್ಲಿ ಸಿದ್ದು ರಾಜೀನಾಮೆ : ಸಾಮ್ರಾಟನ ಮಾತು ಸಂಚಲನ..!

- Advertisement -

 

ಬೆಂಗಳೂರು : ಜಾತಿ ಗಣತಿ ಬಗ್ಗೆ ಆಡಳಿತ ಹಾಗೂ ವಿಪಕ್ಷಗಳ ನಡುವಿನ ಜಟಾಪಟಿ ಜೋರಾಗಿದ್ದು ವರದಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇನ್ನೂ ಇದೇ ವಿಚಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾಂಗ್‌ ಎಲ್ಲೋ ಕುಳಿತು ಜಾತಿ ಗಣತಿಯ ವರದಿಯನ್ನು ಸಿದ್ಧಪಡಿಸಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಮತ್ತು ಗ್ಯಾಂಗ್‌ ಎಲ್ಲೋ ಕುಳಿತು ಸಿದ್ಧಪಡಿಸಿರುವ ಈ ವರದಿಯನ್ನು ಯಾರೂ ಒಪ್ಪಬೇಕಿಲ್ಲ. ಇನ್ನೂ ಹತ್ತು ವರ್ಷದಲ್ಲಿ 1 ಕೋಟಿ ಮಕ್ಕಳು ಜನಿಸಿದರೆ ಅವರೆಲ್ಲರನ್ನೂ ಯಾವ ವರ್ಗದಲ್ಲಿ ಸೇರಿಸುತ್ತಾರೆ..? ಹೊಸ ಪೀಳಿಗೆಯ ಭವಿಷ್ಯವೇನು.? ಅವರ ಮೀಸಲಾತಿಯ ಮಾನದಂಡವೇನು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಂತ್ರಿಗಳನ್ನು ಜಾತಿಯ ಬಲೆಗೆ ಸಿಲುಕಿಸಲಾಗಿದೆ..

ಅಲ್ಲದೆ ಈ ವರದಿ ಸಿದ್ಧಪಡಿಸಲು ನೇತೃತ್ವ ವಹಿಸಿದ್ದ ಕಾಂತರಾಜು ಪಲಾಯನ ಮಾಡಿದ್ದಾರೆ, ಜಯಪ್ರಕಾಶ್‌ ಹೆಗ್ಡೆ ವರದಿಯನ್ನು ತೆರೆದು ನೋಡಿದಾಗ ಅದೊಂದು ಪ್ರತಿಯ ರೀತಿ ಕಂಡುಬಂದಿದೆ. ಅಲ್ಲದೆ ಈ ಜಾತಿ ಗಣತಿಯ ವಿಚಾರಕ್ಕೆ ಕರೆಯಲಾಗಿದ್ದ ಸಚಿವ ಸಂಪುಟ ಸಭೆಯು ಸಂಪೂರ್ಣ ವಿಫಲವಾಗಿದೆ. ಇನ್ನೂ ಈ ಜಾತಿಯ ಬಲೆಯಲ್ಲಿ ಮಂತ್ರಿಗಳನ್ನು ಸಿಲುಕಿಸಿ ಅವಮಾನಿಸಲಾಗುತ್ತಿದೆ. ಅಭಿಪ್ರಾಯ ನೀಡುವಂತೆ ತಿಳಿಸಿ ಅವರನ್ನು ಇಕ್ಕಟ್ಟಿಗೆ ದೂಡಲಾಗಿದೆ, ಯಾಕೆಂದರೆ ಅವರಿಂದ ಅಭಿಪ್ರಾಯ ಪಡೆದು ಬಳಿಕ ಇಂಥವರೆ ವಿರೋಧಿಸಿದ್ದಾರೆ ಅಂತ ಬಹಿರಂಗ ಪಡಿಸಿ ಅವರನ್ನು ಸಂಕಷ್ಟಕ್ಕೆ ತಳ್ಳಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೂ ರಾಜ್ಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ನವೆಂಬರ್‌ನಲ್ಲಿ ರಾಜೀನಾಮೆ ನೀಡಲಿದ್ದಾರೆ, ಆ ವೇಳೆಯಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅಶೋಕ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಶಾಲಾ ಮಕ್ಕಳನ್ನು ಬಳಸಲಾಗಿದೆ..!

ಇವರು ಸಿದ್ದಗಂಗಾ ಮಠಕ್ಕೆ ಸಮೀಕ್ಷೆ ಮಾಡುವವರು ಹೋಗಿಲ್ಲ. ದಾವಣಗೆರೆಯ ಶಾಸಕರು ಅದನ್ನೇ ಹೇಳಿದ್ದಾರೆ. ಜಾತಿ ಗಣತಿ ಮಾಡಿರುವ ವಿಧಾನವೇ ಅವೈಜ್ಞಾನಿಕವಾಗಿದೆ. ಸಮೀಕ್ಷೆಯಲ್ಲಿ ಶಾಲಾ ಮಕ್ಕಳನ್ನು ಬಳಸಲಾಗಿದೆ. ಒಂದೇ ಕಡೆ ಕುಳಿತು ದತ್ತಾಂಶ ಬರೆಯಲಾಗಿದೆ. ಇದಕ್ಕಾಗಿ ಖರ್ಚು ಮಾಡಿದ 165 ಕೋಟಿ ರೂಪಾಯಿ ಯಾರ ಜೇಬಿಗೆ ಹೋಗಿದೆ? ಮುಸ್ಲಿಮರು ಬಹುಸಂಖ್ಯಾತರೆಂದು ವರದಿಯಲ್ಲಿ ತಿಳಿದುಬಂದಿರುವುದರಿಂದ ಅವರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಕೂಡಲೇ ತೆಗೆದುಹಾಕಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಕೇಳೋಕೆ ರೈಟ್ಸ್‌ ಇದೆ..

ಜಾತಿ ಗಣತಿ ವರದಿಯ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದಾರೆ. ಸಮುದಾಯದ ಕುರಿತು ಡಿಸಿಎಂ ಹಾಗೂ ಸಚಿವರು ಸಭೆ ನಡೆಸಿದ್ದಾರೆ. ಆದರೆ ಸಾರ್ವಜನಿಕರಲ್ಲಿ ಆದ ಚರ್ಚೆಯನ್ನೇ ಅವರು ಮಾಡಿದ್ದಾರೆ. ಅಲ್ಲದೆ ಇದರ ಬಗ್ಗೆ ಅಭಿಪ್ರಾಯದ ಸಲುವಾಗಿ ಸಮಯ ಕೇಳಿದ್ದಾರೆ, ಇದು ಬಿಟ್ಟರೇ ಬೇರೇ ಏನೂ ಇಲ್ಲ. ಯಾರು, ಏನು ಮಾಹಿತಿ ಕೊಡಬೇಕು ಅದನ್ನ ಸಲ್ಲಿಸುತ್ತಾರೆ. ಸಮುದಾಯಗಳು ಕೇಳೋಕೆ ರೈಟ್ಸ್ ಇದೆ, ಅದನ್ನ ರೈಟಿಂಗ್‌ನಲ್ಲಿ ಕೊಡೋಕೆ ಹೇಳಿದ್ದಾರೆ. ಸೋಮವಾರ ಕೂಡ ಸಭೆ ಮಾಡುತ್ತೇವೆ, ಸಮುದಾಯವಾರು ಸಭೆ ಮಾಡಿ ಅದನ್ನ ಡಿಸಿಎಂ ಅವರ ಮುಂದೆ ಹೇಳೋ ಕೆಲಸ ಮಾಡುತ್ತೇವೆ ಎಂದು ಆರ್‌ ಅಶೋಕ್‌ ಹೇಳಿದ್ದಾರೆ.

- Advertisement -

Latest Posts

Don't Miss