Wednesday, August 20, 2025

Latest Posts

ವಿಜಯಪುರ ಜಿಲ್ಲೆಯಲ್ಲಿ ಇವೆ ಮೂರು ಎತ್ತುಗಳು..! ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು..!

- Advertisement -

ವಿಜಯಪುರ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಜೋಡೆತ್ತುಗಳ ವಿಚಾರ ಪ್ರಸ್ತಾಪವಾಗಿದೆ. ಸುದ್ದಿಗೋಷ್ಠಿ ನಡೆಸಿದ ಮುದ್ದೇಬಿಹಾಳ ಬಿಜೆಪಿ ಶಾಸಕ ವಿಜಯಪುರ ಜಿಲ್ಲೆಯಲ್ಲಿನ ಮೂರು ಎತ್ತುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.‌ ಜಿಲ್ಲೆಯಲ್ಲಿ ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು ಇವೆ ಎನ್ನುವ ಮೂಲಕ ಮೂವರು ಸಚಿವರನ್ನ ಟೀಕಿಸಿದ್ದಾರೆ. ಗೃಹ ಸಚಿವ ಎಂ ಬಿ ಪಾಟೀಲ, ಆರೋಗ್ಯ ಸಚಿವ ಶಿವಾನಂದ ಪಾಟೀಲ ಹಾಗೂ ತೋಟಗಾರಿಕ ಸಚಿವ ಎಂ ಸಿ ಮನಗೂಳಿ ಯವ್ರನ್ನ ಟಾರ್ಗೆಟ್ ಮಾಡಿ ಶಾಸಕ ನಡಹಳ್ಳಿ ವಾಗ್ದಾಳಿಯನ್ನ ನಡೆಸಿದ್ದಾರೆ.

ಮೂವರು ಸಚಿವರನ್ನ ಒಬ್ಬೊಬ್ಬರಿಗೆ ಹೋಲಿಸಿ ಅವರು ಯಾರ್ಯಾರು ಅನ್ನೋದನ್ನ ನೀವೆ ತಿಳಿದುಕೊಳ್ಳಿ ಎಂದು ಕೊನೆಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.. ಯಾರ್ಯಾರ ಮನೆಗೆ ಕಾಂಟ್ರಾಕ್ಟರ್ ಗಳು ಹೋಗ್ತಾರೆ, ಪರ್ಸೆಂಟೆಜ್ ಮಾತಾಡ್ತಾರೆ ಅನ್ನೋದು ನಿಮಗೆ ಗೊತ್ತಿದೆ ಎಂದಿದ್ದಾರೆ. ಸದ್ಯ ನಡಹಳ್ಳಿ ಹೇಳಿಕೆ ಈಗ ವಿಜಯಪುರ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ..

- Advertisement -

Latest Posts

Don't Miss