Political News: ‘ನೂರಕ್ಕೆ ನೂರು’ ಲೂಟಿಯಲ್ಲಿ ತೊಡಗಿರುವುದೇ ಇವರ ಗ್ಯಾರಂಟಿ: ಬಿ.ವೈ.ವಿಜಯೇಂದ್ರ

Political News: ರಾಜ್ಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪದೇ ಪದೇ ಆರೋಪಗಳು ಕೇಳಿಬರುತ್ತಿದೆ. ಹಾಗಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಅಧ್ಯಾಯ ಅಬಕಾರಿ ಇಲಾಖೆಯ ಮೂಲಕ ಬಯಲಾಗಿದೆ. 27 ಲಕ್ಷ ರೂಪಾಯಿ ಲಂಚ ಪಡೆಯುವಾಗ ಅಬಕಾರಿ DC ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಕೇವಲ ಒಂದು ಸಣ್ಣ ಚಿತ್ರಣವಷ್ಟೇ ಎಂದಿದ್ದಾರೆ.

ಪ್ರಕರಣದಲ್ಲಿ ಅಬಕಾರಿ ಸಚಿವ ಶ್ರೀ ಆರ್.ಬಿ. ತಿಮ್ಮಾಪುರ ಹಾಗೂ ಅವರ ಪುತ್ರನ ಹೆಸರು ಕೇಳಿಬಂದಿರುವುದು ಅತ್ಯಂತ ಗಂಭೀರ ವಿಚಾರ. ಹಾಗಿದ್ದರೂ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಮೌನ ಅವರ ಆಡಳಿತ ಯಂತ್ರದ ಮಾತ್ರವಲ್ಲ ಅವರ ನೈತಿಕ ಪತನಕ್ಕೂ ಸಾಕ್ಷಿಯಾಗಿದೆ. ಗ್ಯಾರಂಟಿಗಳ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದವರು, ‘ನೂರಕ್ಕೆ ನೂರು’ ಲೂಟಿಯಲ್ಲಿ ತೊಡಗಿರುವುದೇ ಇವರ ಗ್ಯಾರಂಟಿ ಎಂಬುದು ಸಾಬೀತಾಗುತ್ತಲೇ ಇದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರೇ, ನಿಮ್ಮ ಸಂಪುಟದ ಸಹೋದ್ಯೋಗಿಗಳ ಮೇಲೆ ಬಂದಿರುವ ಆರೋಪದಿಂದ ನೀವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಸಚಿವರ ರಾಜೀನಾಮೆ ಪಡೆಯಿರಿ, ಇಲ್ಲವೇ ಅವರನ್ನು ಸಂಪುಟದಿಂದ ವಜಾಗೊಳಿಸಿ, ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದ ತನಿಖೆ ನಡೆಸಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

About The Author