- Advertisement -
ಪಂಚರಾಜ್ಯ ಚುನಾವಣೆ ಘೋಷಣೆಯಾದ ಬಳಿಕ ಉತ್ತರ ಪ್ರದೇಶದ ಚುನಾವಣೆ ನಾನಾ ತಿರುವುಗಳನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶದ ಒಬಿಸಿ ಪ್ರಭಲ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಯಾವ ದೆಸೆಯಿಂದ ಬಿಜೆಪಿ ಪಕ್ಷ ತೊರೆದರೋ … ಅವರು ಹೋಗಿದ್ದೋ ಹೋಗಿದ್ದು ಅವರ ಜೊತೆ ಒಬ್ಬೊಬ್ಬರಂತೆ 8 ಜನ ಶಾಸಕರು ಬಿಜೆಪಿ ತೊರೆದರು, ಇಂದು ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಮತ್ತು ಇತರ ಐದು ಶಾಸಕರನ್ನು ಸಮಾಜವಾದಿ ಪಕ್ಷವು (Samajwadi Party) ಶುಕ್ರವಾರ ಪಕ್ಷಕ್ಕೆ ಸ್ವಾಗತಿಸಿದೆ. ಬಿಜೆಪಿಯಿಂದ ನಾಯಕರು ಬಂದಿದ್ದೇ ಬಂದಿದ್ದು ವಿಕೆಟ್ಗಳು ಬೀಳುತ್ತಿವೆ ಎಂದು ಹೇಳಿದ್ದಾರೆ. ಭಗವತಿ ಸಾಗರ್, ರೋಷನ್ವಾಲ್ ವರ್ಮಾ, ವಿನಯ್ ಶಕ್ಯಾ ಬ್ರಿಜೇಶ್ ಪ್ರಜಾಪತಿ ಮತ್ತು ಮುಖೇಶ್ ವರ್ಮಾ, ಅಮರ್ ಸಿಂಗ್ ಚೌಧರಿ ಕೂಡ ಎಸ್ಪಿಗೆ ಸೇರ್ಪಡೆಗೊಂಡರು.
- Advertisement -