ಮಹಾ – ಮೋಸ, ಜ್ಯೋತಿಷ್ಯ ಆ್ಯಪ್‌ನಲ್ಲಿ ₹20 ಲಕ್ಷ ವಂಚನೆ!

ಪೂಜೆ ಮಾಡಿಸೋಣ… ನಿಮ್ಮ ಕುಟುಂಬದ ಮೇಲೆ ಗಂಡಾಂತರ ಇದೆ. ದೇವರಿಗೆ ಚಿನ್ನ ಅರ್ಪಿಸಿದರೆ ಎಲ್ಲವೂ ಸರಿಯಾಗುತ್ತೆ! ಅಂತ ಹೇಳಿ ಪೂಜೆ ಹೆಸರಿನಲ್ಲಿ ಇತ್ತೀಚೆಗೆ ₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನ ಸಿಂಧನೂರಿನ ಮೂವರು, ಹಾವೇರಿ ಯುವತಿಗೆ ವಂಚಿಸಿದ್ದಾರೆ.

ಹಾವೇರಿ ಜಿಲ್ಲೆಯ ಯುವತಿಯನ್ನು ಟಾರ್ಗೆಟ್ ಮಾಡಿಕೊಂಡು, ಜ್ಯೋತಿಷ್ಯ, ಪೂಜಾ ಪರಿಹಾರ ಎಂಬ ಹೆಸರಿನಲ್ಲಿ ಮೂವರು ವ್ಯಕ್ತಿಗಳು ಸೇರಿ ಭಾರಿ ಹಣದ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು, ₹20.88 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಹೌದು ಈ ಮಾತುಕತೆ ನಡೆದಿದ್ದು ಒಂದು astrology app ಮುಖಾಂತರ. ಯುವತಿ ಆ್ಯಪ್‌ನಲ್ಲಿ ಖಾತೆ ತೆರೆದು, ಜ್ಯೋತಿಷ್ಯ ಪರಿಹಾರಗಳ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದರು. ಇದೇ ಮಾರ್ಗದಿಂದ ಆರೋಪಿಗಳು ಯುವತಿಯನ್ನು ಜಾಲಕ್ಕೆ ಬೀಳಿಸಿದ್ದಾರೆ.

ಮೊದಲಿಗೆ, ಯಂತ್ರ ಪೂಜೆಗೆ ಹಣ ಕೇಳಿದರು. ಬಳಿಕ, ನಿಮ್ಮ ಕುಟುಂಬದವರಿಗೆ ಗಂಡಾಂತರವಿದೆ ಎಂದು ನಂಬಿಸಿ ಚಿನ್ನಾಭರಣ ನೀಡುವಂತೆ ಒತ್ತಾಯಿಸಿದರು. ಪೂಜೆ ಮಾಡಿದ ನಂತರ ನಿಮ್ಮ ಮನೆಗೆ ಹಿಂದಿರುಗಿಸುತ್ತೇವೆ ಅಂತ ಯುವತಿಯನ್ನ ನಂಬಿಸಿ, ಮೈಸೂರಿನ ಬಸ್ ನಿಲ್ದಾಣದಲ್ಲಿ ಅವರೊಂದಿಗೇ ಭೇಟಿಯಾಗಿ ಚಿನ್ನಾಭರಣ ಪಡೆದಿದ್ದಾರೆ.
ಆದರೆ ನಂತರ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಗಲೇ ಯುವತಿ ಠಾಣೆಗೆ ಸಂಪರ್ಕಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

23 ವರ್ಷದ ಯುವತಿ ಜೋತಿಷ್ಯ, ಭವಿಷ್ಯದಲ್ಲಿ ನಂಬಿಕೆ ಇಟ್ಟುಕೊಂಡು ಈ ರೀತಿ ಪುಣ್ಯಕರ್ಮದ ಹೆಸರಿನಲ್ಲಿ ವಂಚಿತೆಯಾಗಿದ್ದಾರೆ. ಇದೊಂದು ದೈವೀಶ್ರದ್ಧೆಯ ದುರ್ಬಳಕೆಯ ನಿದರ್ಶನ. ಇಂಥಾ ಮೋಸದ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಈ ಪ್ರಕರಣ ಸಾಕ್ಷಿಯಾಗಿದೆ.

ವರದಿ : ಲಾವಣ್ಯಾ ಅನಿಗೋಳ

 

About The Author