Monday, April 14, 2025

Latest Posts

1.26 ಕೋಟಿ ರೂ. ಮೌಲ್ಯದ ಅಡಕೆ ಸಾಗಿಸುತ್ತಿದ್ದ ಲಾರಿ-ಡ್ರೈವರ್‌ ನಾಪತ್ತೆ, ಪೊಲೀಸ್ ಠಾಣೆಗೆ ದೂರು

- Advertisement -

ಶಿವಮೊಗ್ಗ: 1.26 ಕೋಟಿ ರೂ. ಮೌಲ್ಯದ ಅಡಿಕೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ನಾಪತ್ತೆಯಾಗಿದ್ದು, ಚಾಲಕನ ಮೊಬೈಲ್‌ ನಂಬರ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಇದರಿಂದ ಕಂಗಾಲಾದ ಉದ್ಯಮಿ ದೂರು ದಾಖಲಿಸಿದ್ದಾರೆ.

ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟಗಾರರ ಸಹಕಾರ ಸಂಘಕ್ಕೆ ಸಂಬಂಧಿಸಿದ ಅಡಿಕೆ ನಾಪತ್ತೆಯಾಗಿದ್ದು, ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಗುಜರಾತ್ ನ ಅಹಮದಾಬಾದ್ ಗೆ ಅಡಿಕೆ ಕಳುಹಿಸಲಾಗಿತ್ತು.

350 ಚೀಲದಲ್ಲಿ 245 ಕ್ವಿಂಟಾಲ್ ಅಡಕೆಯನ್ನು ಲಾರಿಯಲ್ಲಿ ಕಳುಹಿಸಲಾಗಿದೆ. ಆದರೇ ಮೇ 25ರಂದು ಲಾರಿ ಶಿವಮೊಗ್ಗದಿಂದ ತೆರಳಿದ್ದು, ಮೇ 30ರ ಒಳಗೆ ಅಡಿಕೆ ತುಂಬಿದ ಲಾರಿ ಅಹಮದಾಬಾದ್ ತಲುಪಬೇಕಿತ್ತು.     ಆದರೆ ಇಲ್ಲಿಯ ತನಕ ಲಾರಿ ಅಹಮದಾಬಾದ್ ಗೆ ತಲುಪಿಲ್ಲ. ಅಲ್ಲದೆ ಲಾರಿ ಚಾಲಕ ಮಹಮ್ಮದ್ ಗೌಸ್ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ ಎಂದು ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲಾರಿಯಲ್ಲಿದ್ದ ಅಡಿಕೆ ಮೌಲ್ಯ 1.26 ಕೋಟಿ ರೂ. ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಅಡಿಕೆ ಮತ್ತು ಲಾರಿಯನ್ನು ಹುಡುಕಿಕೊಡುವಂತೆ ಉದ್ಯಮಿ ದೋಲಾರಾಮ್ ಅವರು ಶಿವಮೊಗ್ಗದ ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಕೋಟೆ ಠಾಣ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss