ಒಂದೇ ಗಂಟೆಯಲ್ಲಿ 10 ಕೆಜಿ ಗೋಡಂಬಿ-ಬಾದಾಮಿ ತಿನ್ನೋದು ಅಂದ್ರೆ ಸುಮ್ನೆನಾ? ಅಂಬಾನಿ ಮನೆಯವ್ರಿಗೂ ಇದು ಕಷ್ಟ. ಅಂಬಾನಿ ಫ್ಯಾಮಿಲಿಗೆ ಇದು ದುಬಾರಿ ಅನ್ಸುತ್ತೆ. ಅಷ್ಟೇ ಅಲ್ಲ.. ತಿಂದವರು ಜೀರ್ಣಿಸಿಕೊಳ್ಳೋದು ಕಷ್ಟ. ಆದರೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಭಡ್ವಾಹಿ ಗ್ರಾಮ ಪಂಚಾಯತ್‌ನ ವಿಷಯ ಈಗ ಭಾರೀ ಚರ್ಚೆಗೆ ಒಳಗಾಗಿದೆ.
ಜಲ ಗಂಗಾ ಸಂವರ್ಧನ ಅಭಿಯಾನ ದಡಿ, ಜಲ ಚೌಪಾಲ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಉದ್ದೇಶ ಏನಂದ್ರೆ ಜನರಿಗೆ ನೀರನ್ನು ಹೇಗೆ ಉಳಿಸಬೇಕು ಎಂಬ ಅರಿವು ಮೂಡಿಸುವುದಾಗಿತ್ತು. ಆದರೆ, ಅಧಿಕಾರಿಗಳ ಪಾಲಿಗೆ ಇದು ಅರಿವಿನ ಕಾರ್ಯಕ್ರಮವಲ್ಲ. ಅದು ತಿನ್ನುವ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು.
ಕೇವಲ ಒಂದು ಗಂಟೆ ಕಾರ್ಯಕ್ರಮಕ್ಕೆ 5 ಕೆಜಿ ಗೋಡಂಬಿ, 5 ಕೆಜಿ ಬಾದಾಮಿ, 3 ಕೆಜಿ ಒಣದ್ರಾಕ್ಷಿ, 30 ಕೆಜಿ ನಮ್ಮಿನ್, 20 ಪ್ಯಾಕೆಟ್ ಬಿಸ್ಕತ್ತು, 6 ಕೆಜಿ ಹಾಲು, 5 ಕೆಜಿ ಸಕ್ಕರೆ, 2 ಕೆಜಿ ತುಪ್ಪ ಒಟ್ಟು ₹24,000ಕ್ಕೂ ಅಧಿಕ ವೆಚ್ಚದಲ್ಲಿಇವು ಎಲ್ಲಾ ಸಿದ್ಧಗೊಂಡಿತ್ತು. ಈ ಗ್ರಾಮದಲ್ಲಿ ಬಾವಿಗಳು ಒಣಗಿರುವ ಸ್ಥಿತಿ, ಕೆರೆಗಳ ಪೈಪೋಟಿ, ನೀರಿಗಾಗಿ ಜನ ಹೊರೆ ಹೊರುತ್ತಿದ್ದಾರೆ. ಆದರೆ ಈ ಸಭೆಯಲ್ಲಿ ಅಧಿಕಾರಿಗಳು ನೀರನ್ನು ಉಳಿಸೋಕೆ ಬಂದು, ಹೊಟ್ಟೆ ತುಂಬುವ ಟಿಫಿನ್ ಮುಗಿಸಿಕೊಂಡು ಹೋದರಂತೆ! ಇದೇನಾ ಜವಾಬ್ದಾರಿ? ಅಂತ ಜನಸಾಮಾನ್ಯರು ದೂರಿದ್ದಾರೆ.
ಒಬ್ಬ ಹಳ್ಳಿಯ ವ್ಯಕ್ತಿಗೆ ಒಂದು ಲೀಟರ್ ನೀರು ಸಿಗೋದಿಲ್ಲ, ಅಧಿಕಾರಿಗೆ 5 ಕೆಜಿ ಗೋಡಂಬಿ ಬೇಕಾ? ಇದು ಜಲ ಸಂರಕ್ಷಣಾ ಕಾರ್ಯಕ್ರಮವೇ ಅಥವಾ ಔತಣದ ಮೇಳವೇ? ಸಚಿವರು ವಿಚಿತ್ರರಾ ಅಥವಾ ಅಧಿಕಾರಿಗಳೇ ಅದ್ಭುತರಾ? ಅನ್ನೋದು ಈಗ ಸ್ಥಳೀಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ವರದಿ : ಲಾವಣ್ಯ ಅನಿಗೋಳ