Wednesday, July 30, 2025

Latest Posts

ತಲೆ ನೋವು ಅಂದಿದ್ದಕ್ಕೆ ವ್ಯಕ್ತಿಯ ವಿರುದ್ಧ 100 ಕೋಟಿ ರೂ. ದಂಡ..?!

- Advertisement -

ನಿನ್ನೆ ಕೋವಿಶೀಲ್ಡ್ ಕೋವಿಡ್ ಲಸಿಕೆ ತೆಗೆದುಕೊಂಡು ನನಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಹೀಗಾಗಿ ನನಗೆ ಸೀರಂ ಕಂಪನಿ 5ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದ್ದರು. ಇಂದು ಆ ವ್ಯಕ್ತಿಯ ವಿರುದ್ಧ ಸೀರಂ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿದ್ದು, 100 ಕೋಟಿ ರೂಪಾಯಿ ದಂಡ ನೀಡಬೇಕೆಂದು ಆಗ್ರಹಿಸಿ ನೋಟೀಸ್ ಕಳುಹಿಸಿದೆ.

ಚೆನ್ನೈ ಮೂಲದ 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊರೊನಾ ಬಂದ ಕಾರಣಕ್ಕಾಗಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದರು. ಔಷಧಿಯ ಪರಿಣಾಮ ವಿಪರೀತ ತಲೆನೋವು ಕಾಣಿಸಿಕೊಂಡಿದೆ, ಹಾಗಾಗಿ 5ಕೋಟಿ ರೂ. ಪರಿಹಾರ ಬೇಕೆಂದು ಆಗ್ರಹಿಸಿದ್ದರು. ಆದರೆ ಸೀರಂ ಕಂಪನಿ, ನಮ್ಮ ಲಸಿಕೆಗೂ ಈ ವ್ಯಕ್ತಿಯ ತಲೆನೋವಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಸಂಸ್ಥೆಯ ಹೆಸರು ಹಾಳು ಮಾಡಲು ಮಾಡಿದ ತಂತ್ರವಿದು ಎಂದು ಆರೋಪಿಸಿದ್ದಾರೆ. ಅಲ್ಲದೇ, ಈ ತಪ್ಪಿಗೆ 100 ಕೋಟಿ ದಂಡತೆರಬೇಕೆಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಅಲ್ಲದೇ, ಇದು ಸುಳ್ಳು ಆರೋಪ. ಅವರ ಮೇಲೆ ಲಸಿಗೆ ಪ್ರಯೋಗಿಸಿ ಹಲವು ದಿನಗಳೇ ಆಗಿದೆ. ಅವರೀಗ ಆರೋಗ್ಯವಾಗಿದ್ದಾರೆ. ಕೋವಿಡ್‌ನಿಂದ ಮುಕ್ತರಾಗಿದ್ದಾರೆ. ಅವರಿಗಾಗುತ್ತಿರುವ ತಲೆ ನೋವಿಗೂ ನಮ್ಮ ಲಸಿಕೆಗೂ ಯಾವುದೇ ಸಂಬಂಧವಿಲ್ಲವೆಂದು ಸಂಸ್ಥೆಯ ಹಿರಿಯ ಅಧಿಕಾರಿ ಹೇಳಿಕೆ ನೀಡಿದ್ದಾರೆ.

- Advertisement -

Latest Posts

Don't Miss