Saturday, June 21, 2025

Latest Posts

ಕದನ ವಿರಾಮ ಉಲ್ಲಂಘಿಸಿ ಗುಮ್ಮಿಸಿಕೊಂಡ ಪಾಕಿಸ್ತಾನ :‌ ಪಾಕ್ ರಣಹೇಡಿ ನಾಯಕರ ಬಾಯಿ ಬಂದ್..!

- Advertisement -

ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಈ ನಡುವೆ ಕಳೆದ ಮೇ 4 ಹಾಗೂ 5ರ ಮಧ್ಯರಾತ್ರಿ ಭಾರತದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಶಸ್ತ್ರಾಸ್ತ್ರಗಳ ಸಮೇತ ಉಗ್ರರಾಷ್ಟ್ರ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಸತತ 11ನೇ ದಿನವೂ ಪಾಕ್‌ ಉಪಟಳ..

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ವ್ಯಾಪ್ತಿಯಲ್ಲಿ ಹೇಡಿ ರಾಷ್ಟ್ರ ಪಾಕಿಸ್ತಾನದ ಸೇನೆಯು ಎಲ್‌ಒಸಿಯಾದ್ಯಂತ ಅಪ್ರಚೋದಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದೆ. ಸತತ 11ನೇ ದಿನವೂ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು. ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಭಾರತ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನಿ ಪಡೆಗಳು ಗಡಿಯಲ್ಲಿ ಹಲವಾರು ಸ್ಥಳಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಭಾರತೀಯ ಸೇನೆ ತಿಳಿಸಿದೆ.

ಇಮ್ರಾನ್‌ ಖಾನ್‌, ಭುಟ್ಟೋ ಬಾಯಿ ಬಂದ್..

ಇನ್ನೂ ಭಾರತವು ಪಾಕಿಸ್ತಾನದ ಮೇಲೆ ನಿರಂತರವಾಗಿ ಡಿಜಿಟಲ್ ದಾಳಿಗಳನ್ನು ನಡೆಸುತ್ತಿದೆ. ಈ ಸಂಬಂಧ ಭಾರತ ಸರ್ಕಾರವು ಇದೀಗ ಮಾಜಿ ಪ್ರಧಾನಿ ನಾಯಕ ಇಮ್ರಾನ್ ಖಾನ್ ಅವರ ಟ್ವಿಟ್ಟರ್‌ ಖಾತೆಗೆ ನಿರ್ಬಂಧ ಹೇರಿದೆ. ಇಮ್ರಾನ್ ಖಾನ್ ಜೊತೆಗೆ ಭಾರತ ಸಿಂಧೂ ನದಿ ನೀರನ್ನು ತಡೆ ಹಿಡಿದರೆ ಭಾರತೀಯರ ರಕ್ತ ಹರಿಯುತ್ತದೆ ಎಂದು ಬೊಗಳಿದ್ದ ಮಾಜಿ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಗಾಯಕ ಅತಿಫ್ ಅಸ್ಲಾಂ ಅವರ ಖಾತೆಗಳನ್ನು ಸಹ ಬ್ಲಾಕ್‌ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.

ಒಂದೊಂದು ಹೊಡೆತ..

ಕಾನೂನು ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಇಬ್ಬರೂ ಪಾಕಿಸ್ತಾನಿ ರಾಜಕಾರಣಿಗಳ ಎಕ್ಸ್‌ ಅಂದರೆ ಟ್ವಿಟ್ಟರ್‌ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರವು ಭಾರತದಲ್ಲಿ ಹನಿಯಾ ಆಮಿರ್, ಮಹಿರಾ ಖಾನ್, ಅಲಿ ಜಾಫರ್, ಸನಮ್ ಸಯೀದ್, ಬಿಲಾಲ್ ಅಬ್ಬಾಸ್, ಇಕ್ರಾ ಅಜೀಜ್, ಇಮ್ರಾನ್ ಅಬ್ಬಾಸ್ ಮತ್ತು ಸಜಲ್ ಅಲಿ ಸೇರಿದಂತೆ ಹಲವಾರು ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಿತ್ತು.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನ ಪ್ರವಾಸಿಗರು ಸಾವನ್ನಪ್ಪಿದ ನಂತರ, ಸತತ 11ನೇ ದಿನವೂ ಪಾಕಿಗಳಿಂದ ಜಮ್ಮು ಮತ್ತು ಕಾಶ್ಮೀರದ ಗಡಿಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿದೆ. ಕಳೆದ ಫೆಬ್ರವರಿ 25, 2021 ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದದ ನಂತರ ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಅಂದರೆ ಐಬಿಯಲ್ಲಿ ಕದನ ವಿರಾಮ ಉಲ್ಲಂಘನೆಗಳು ಕಡಿಮೆಯಾಗಿದ್ದವು. ಆದಾಗ್ಯೂ, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉದ್ವಿಗ್ನತೆ ಗಮನಾರ್ಹವಾಗಿ ಹೆಚ್ಚಾಗಿದೆ.

Preparation of bunkers..

ಏಪ್ರಿಲ್ 24 ರ ರಾತ್ರಿಯಿಂದ ಭಾರತ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳ ನಂತರ – ಪಾಕಿಸ್ತಾನಿ ಪಡೆಗಳು ಕಾಶ್ಮೀರ ಕಣಿವೆಯಿಂದ ಹಿಡಿದು ಎಲ್‌ಒಸಿಯ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಉತ್ತರ ಕಾಶ್ಮೀರದ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ನಡೆದಿದ್ದ ಭಾರತೀಯ ಪೋಸ್ಟ್‌ಗಳ ಮೇಲೆ ಆರಂಭಿಕ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯು ಮುಂದೆ ಪೂಂಚ್ ವಲಯಕ್ಕೆ ಮತ್ತು ನಂತರ ಜಮ್ಮು ಪ್ರದೇಶದ ಅಖ್ನೂರ್‌ವರೆಗೂ ವ್ಯಾಪಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಗಡಿ ಪ್ರದೇಶಗಳಲ್ಲಿ ಗಾಬರಿಗೊಂಡ ನಿವಾಸಿಗಳು ಸಂಭಾವ್ಯ ಯುದ್ಧದ ಭೀತಿಯಿಂದ ಪಾರಾಗಲು ಸಮುದಾಯ ಮತ್ತು ವೈಯಕ್ತಿಕ ಬಂಕರ್‌ಗಳನ್ನು ತೆರವುಗೊಳಿಸಲು ಮತ್ತು ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ. ಏಪ್ರಿಲ್ 24 ರಂದು, ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿತು, ವಾಘಾ ಗಡಿ ದಾಟುವಿಕೆಯನ್ನು ಮುಚ್ಚಿತು, ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಹೀಗೆ ಉಗ್ರರನ್ನು ಪೋಷಿಸಿ ಜಾಗತಿಕವಾಗಿ ಕಂಟಕ ಪ್ರಾಯವಾಗಿರುವ ಪಾಕಿಸ್ತಾನದ ವಿರುದ್ಧ ಭಾರತ ದಿನಕ್ಕೊಂದರಂತೆ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶತ್ರು ರಾಷ್ಟ್ರಕ್ಕೆ ದೊಡ್ಡ ಹೊಡೆತ ನೀಡುತ್ತಿದೆ.

- Advertisement -

Latest Posts

Don't Miss