Bollywood News: ಬಾಲಿವುಡ್ ಖ್ಯಾತ ಕೋರಿಯೋಗ್ರಾಫರ್ ರೆಮೋ ಡಿಸೋಜಾ ಮತ್ತು ಅವರ ಪತ್ನಿ ವಿರುದ್ಧ 11 ಕೋಟಿ ಹಣ ವಂಚಿಸಿರುವುದಾಗಿ, ಮುಂಬೈ ಪೊಲೀಸ್ ಠಾಣೆಯಲ್ಲಿ, ಡಾನ್ಸ್ ಗ್ರೂಪ್‌ನ ಲೀಡರ್ ಒಬ್ಬರು ದೂರು ದಾಖಲಿಸಿದ್ದಾರೆ.
ಡ್ಯಾನ್ಸ್ ಗ್ರೂಪ್ ಹೊಂದಿರುವ ಓರ್ವ ವ್ಯಕ್ತಿ ಈ ದೂರು ನೀಡಿದ್ದು, ರೆಮೋ ಮತ್ತು ಅವರ ಪತ್ನಿ ಮತ್ತು ಕೆಲವರು ಸೇರಿ, ತಮ್ಮ ಡಾನ್ಸ್ ಗ್ರೂಪ್‌ನ್ನು ತಮ್ಮ ಡಾನ್ಸ್ ಗ್ರೂಪ್ ಎಂದು ಹೇಳಿ, 11 ಕೋಟಿ ರೂಪಾಯಿವರೆಗೂ ದುಡ್ಡು ಪಡೆದು, ಅದನ್ನು ತಮಗೆ ಕೊಡದೇ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ, ತಮಗೆ ಸೇರಬೇಕಾದ ದುಡ್ಡು ಕೊಡಿ ಎಂದು ಕೇಳಿದಕ್ಕೆ, ಬೆದರಿಕೆ ಹಾಕಿದ್ದಾರೆಂದು ಕೂಡ ಆರೋಪಿಸಿದ್ದಾರೆ.
ತಾವು ಕೊಟ್ಟ ಶೋಗಳಲ್ಲಿ ಬಂದ ದುಡ್ಡನ್ನು ಅವರೇ ಇಟ್ಟುಕೊಂಡಿದ್ದು, ತಮಗೆ ಬರಬೇಕಾದ ದುಡ್ಡನ್ನು ಕೊಡದೇ ಮೋಸ ಮಾಡಿದ್ದಾರೆಂದು, ಆ ಡಾನ್ಸ್ ಗ್ರೂಪ್ ಲೀಡರ್ ಆರೋಪಿಸಿದ್ದಾರೆ. ರೆಮೋ ಡಿಸೋಜಾ, ಪತ್ನಿ ಲಿಜೆಲ್ಲಾ, ಓಂ ಪ್ರಕಾಶ್ ಶಂಕರ್ ಚೌಹಾಣ್, ರೋಹಿತ್ ಜಾಧವ್, ಫ್ರೇಂ ಪ್ರೊಡಕ್ಷನ್ ಕಂಪನಿ, ವಿನೋದ್ ರಾವತ್, ರಮೇಶ್ ಗುಪ್ತಾ, ಏರ್ವ ಪೊಲೀಸ್ ಅಧಿಕಾರಿ ಸೇರಿ, ಏಳು ಜನರ ವಿರುದ್ಧ ಈ ವ್ಯಕ್ತಿ, ಮಹಾರಾಷ್ಟ್ರದ ಥಾಣೆಯ ಮೀರಾ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗೆ ನೊಟೀಸ್ ನೀಡಿ, ವಿಚಾರಣೆಗೆ ಕರೆಯುವುದಾಗಿ ಹೇಳಿದ್ದಾರೆ. ರೆಮೋ ಡಿಸೋಜಾ ಡಾನ್ಯ್ ಇಂಡಿಯಾ ಡಾನ್ಸ್ ಸೇರಿ ಹಲವು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದವರು. ಅಲ್ಲದೇ, ಸಿನಿಮಾ ನಿರ್ದೇಶಕರರೂ ಆಗಿದ್ದು, ಡಾನ್ಸ್‌ಗೆ ಸಂಬಂಧಿಸಿದ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.