Political News: ಕೇತಗಾನಹಳ್ಳಿ ಜಮೀನಿನ ವಿಚಾರವಾಗಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಈ ಬಗ್ಗೆ ಅವರ ಪುತ್ರ ನಿಖಿಲ್ ಕುಮಾರ್ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.
ನ್ಯಾಯಾಲಯದಿಂದ ಅಂತಿಮವಾಗಿ ಸಿಗುವ ತೀರ್ಪಿಗೆ ನಾವೆಲ್ಲರೂ ತಲೆಬಾಗಲೇಬೇಕು. ಆದರೆ ಎಸ್‌ಐಟಿಯನ್ನು ರಾಜ್ಯ ಸರ್ಕಾರ ಯಾವ ರೀತಿಯಾಗಿ ಬಳಸಿಕ“ಳ್ಳುತ್ತಿದೆ ಎನ್ನುವುದು ನಮ್ಮ ಕಣ್ಣಮುಂದೆ ಇದೆ. ಎಸ್‌ಐಟಿ ಆಗಲಿ, ಲೋಕಾಯುಕ್ತ ಆಗಲಿ ಸ್ವತಂತ್ರವಾಗಿ ತಮ್ಮ ಕೆಲಸ ಮಾಡುವುದಕ್ಕೆ ರಾಜ್ಯ ಸರ್ಕಾರ, ಅವಕಾಶ ಮಾಡಿಕ“ಡಬೇಕು. ಪಾರದರ್ಶಕವಾಗಿ ಈ ಸಂಸ್ಥೆಗಳು ಕೆಲಸ ಮಾಡಬೇಕಾಗಿದೆ. ಆದರೆ 2 ವರ್ಷಗಳಿಂದ ನಿರಂತರವಾಗಿ, ಸರ್ಕಾರ ಆಡಳಿತಕ್ಕೆ ಬಂದಾಗಿಂದ, ಯಾವ ಯಾವ ವ್ಯಕ್ತಿಗಳನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಪಶು ಮಾಡುತ್ತೀರೋ, ಎಸ್‌ಐಟಿಯನ್ನು ದುರ್ಬಳಕೆ ಮಾಡಿಕ“ಂಡ ಪ್ರಕರಣಗಳಲ್ಲಿ ಕೇತಗಾನಹಳ್ಳಿ ಪ್ರಕರಣ ಕೂಡ ಒಂದಾಗಿದೆ.
ಇನ್ನು ದ್ವೇಷದ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿರುವ ನಿಖಿಲ್, ದ್ವೇಷದ ರಾಜಕಾರಣ ಉತ್ತಮವಲ್ಲ. ಇದರಿಂದ ಏನೂ ಸಾಧನೆ ಮಾಡಲಾಗುವುದಿಲ್ಲ. ನಿಮಗೆ ಜನರ ಪರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದಾಗ ನಾವು ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಅದನ್ನು ಬಿಟ್ಟು ನೀವು ದ್ವೇಷ ರಾಜಕಾರಣ ಮಾಡಿದರೆ, ಮುಂದಿನ ಪೀಳಿಗೆಯ ರಾಜಕಾರಣಿಗಳೂ ಅದನ್ನೇ ಮುಂದುವರೆಸಿಕ“ಂಡು ಹೋಗುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಖಿಲ್ ಟಾಂಗ್ ನೀಡಿದ್ದಾರೆ.