Thursday, November 21, 2024

Latest Posts

Nepal bus tragedy: ನೇಪಾಳದಲ್ಲಿ ನದಿಗೆ ಉರುಳಿದ ಭಾರತೀಯ ಪ್ರಯಾಣಿಕರಿದ್ದ ಬಸ್​.. 14 ಮಂದಿ ದುರ್ಮರಣ

- Advertisement -

ಕಠ್ಮಂಡು: ಮಧ್ಯ ನೇಪಾಳದ ಮರ್ಸ್ಯಾಂಗ್ಡಿ ನದಿ (Marsyangdi river)ಗೆ ಭಾರತೀಯ ನೋಂದಾಯಿತ ಪ್ರಯಾಣಿಕ ಬಸ್ (Passenger Bus)​ವೊಂದು ಉರುಳಿ ಬಿದ್ದು14 ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ತನಾಹುನ್ ಜಿಲ್ಲೆ (Tanahun district)ಯ ಐನಾ ಪಹಾರಾ (Aaina Pahara)ದಲ್ಲಿ ಹೆದ್ದಾರಿ ಮೂಲಕ ಪೊಖರಾದಿಂದ ರಾಜಧಾನಿ ಕಠ್ಮಂಡು (Kathmandu from Pokhara) ಕಡೆಗೆ ಬಸ್​ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

UP 53 FT 7623 ನಂಬರಿನ ಬಸ್‌ನಲ್ಲಿ 40 ಭಾರತೀಯ ಪ್ರಯಾಣಿಕರು (Indian passengers) ಪ್ರಯಾಣಿಸುತ್ತಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಈ ಅಪಘಾತ (Accident) ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಈ ದುರ್ಘಟನೆಯಲ್ಲಿ 14 ಪ್ರಯಾಣಿಕರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು DSP ದೀಪಕ್​ ಕುಮಾರ್ ರಾಯಾ ತಿಳಿಸಿದ್ದಾರೆ.

ಸಶಸ್ತ್ರ ಪೊಲೀಸ್ ಪಡೆ ನೇಪಾಳದ ವಿಪತ್ತು ನಿರ್ವಹಣಾ ತರಬೇತಿ ಶಾಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ಪೌಡೆಲ್ ನೇತೃತ್ವದ 45 ತಂಡವು ರಕ್ಷಣಾ ಕಾರ್ಯಾಚರಣೆ (rescue operations)ಯಲ್ಲಿ ಪಾಲ್ಗೊಂಡಿವೆ. ಕಳೆದ ತಿಂಗಳು 65 ಮಂದಿ ಪ್ರಯಾಣಿಕರನ್ನು (passengers)ಹೊತ್ತೊಯುತ್ತಿದ್ದ ಬಸ್ ನೇಪಾಳದ ತ್ರಿಶುಲಿ ನದಿ (Trishuli river)ಗೆ ಉರುಳಿ ಬಿದ್ದಿತ್ತು. ಈ ಬಸ್​ ದುರಂತದಲ್ಲಿ 7 ಭಾರತೀಯರು ಸೇರಿದಂತೆ ಒಟ್ಟು 50 ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದರು.

- Advertisement -

Latest Posts

Don't Miss