- Advertisement -
ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಜ.19 ರವರೆಗೂ ಜಾರಿಯಲ್ಲಿದ್ದ 144 ಸೆಕ್ಷನ್ ಇದೀಗ ಜ.31 ರವರೆಗೂ ವಿಸ್ತರಣೆ ಆಗಿದೆ.
ನಗರದಲ್ಲಿ ಒಂದಲ್ಲಾ ಒಂದು ಕಾರಣಗಳಿಗೆ ಜನರು ಸೇರುತ್ತಲೇ ಇರುತ್ತಾರೆ ಈ ದೃಷ್ಟಿಯಿಂದ ಸಾಮಾಜಿಕ ಅಂತರವನ್ನು ಕಾಪಾಡಲು 144 ಸೆಕ್ಷನ್ ಜಾರಿ ಮಾಡಲಾಗಿದೆ. ಪ್ರತಿಭಟನೆರ‍್ಯಾಲಿ, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಜ.6 ರಿಂದ 19 ರವರೆಗೂ ಜಾರಿಯಲ್ಲಿದ್ದ 144 ಸೆಕ್ಷನ್ ಅನ್ನು ತಿಂಗಳಾAತ್ಯದ ವರೆಗೂ ವಿಸ್ತರಣೆ ಮಾಡಿ ಪೊಲೀಸ್ ಆಯುಕ್ತ ಕಮಲ್‌ಪಂತ್ ಆದೇಶಿಸಿದ್ದಾರೆ.
ರಾತ್ರಿಯ ಜೊತೆಗ ಹಗಲಿನಲ್ಲೂ 144 ಸೆಕ್ಷನ್ ಜಾರಿಯಾಗಿರುತ್ತದೆ, ಯಾವುದೇ ರ್ಯಾಲಿ, ಪ್ರತಿಭಟನೆ, ಸಭೆ-ಸಮಾರಂಭಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
- Advertisement -