Uttara Pradesh: ಹೆಣ್ಣು ಮಗು ಎಂಬ ಕಾರಣಕ್ಕೆ, 15 ದಿನದ ಮಗುವನ್ನು ಜೀವಂತ ಸಮಾಧಿ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಶಹಜಾನ್ಪುರ ಜಿಲ್ಲೆಯ ಜೈತಪುರ ಪ್ರದೇಶದ ಗೋದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಹುಗುಲ್ ನದಿ ಸೇತುವೆ ಬಳಿ ಮರಗಳ ಮಧ್ಯೆ ಮಗುವನ್ನು ಮಣ್ಣಿನಲ್ಲಿ ಜೀವಂತವಾಗಿ ಹೂತುಹಾಕಲಾಗಿದೆ.
ಆದರೆ ದೇವರ ದಯೆಯಿಂದ ಮಗು ಬದುಕಿ ಉಳಿದಿದೆ. ಅದು ಹೇಗೆಂದರೆ, ಮಗು ಉಸಿರಾಡಲು ಸಾಧ್ಯವಾಗದೇ, ಅಳುತ್ತಿರುವುದು, ಅಲ್ಲೇ ಹೋಗುತ್ತಿದ್ದ ಕುರಿಗಾಹಿಗೆ ಕೇಳಿದೆ. ಅಲ್ಲದೇ, ಮಗುವಿನ 1 ಕೈ ಆಚೆ ಬಂದಿತ್ತು. ಇದನ್ನು ಕಂಡು ಕುರಿಗಾಹಿ ತಡ ಮಾಡದೇ, ಸ್ಥಳೀಯರಿಗೆ ವಿಷಯ ತಿಳಿಸಿ, ಮಗುವನ್ನು ಆಚೆ ತೆಗೆದಿದ್ದಾನೆ. ಅಲ್ಲದೇ, ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ‘ಪೋಲೀಸರು ಸ್ಥಳಕ್ಕೆ ಧಾವಿಸಿ, ಮಗುವಿನ ಉಸಿರಾಟ ಗಮನಿಸಿದ್ದಾರೆ. ಆಸ್ಪತ್ರೆಗೆ ಕರೆದ“ಯ್ದು ಚಿಕಿತ್ಸೆ ಕ“ಡಿಸಿದ್ದಾರೆ.
ಅದೃಷ್ಟವಶಾತ್ ಮಗು ಚಿಕಿತ್ಸೆಯ ಪರಿಣಾಮ ಬದುಕಿ ಉಳಿದಿದೆ. ವೈದ್ಯರು, ಮಗು ತುಂಬಾ ವೀಕ್ ಇದ್ದು, ಇರುವೆ ಕಚ್ಚಿ ರಕ್ತ ಕಡಿಮೆಯಾಗಿ ಎಂದಿದ್ದಾರೆ. ಹಾಗಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಮಗುವನ್ನು ಹೀಗೆ ಹೂತು ಹೋದವರಿಗಾಗಿ ಪೋಲೀಸರು ಶೋಧ ಕಾರ್ಯ ಶುರು ಮಾಡಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಕೂಡ ನಡೆದಿದ್ದು, ಜೈತಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

