Sunday, September 8, 2024

Latest Posts

ಕೋಲೆ ಬಸವನಿಗೂ ಆ್ಯಕ್ಷನ್ ಪ್ರಿನ್ಸ್ ಖರಾಬು ಗುಂಗು…!

- Advertisement -

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸತತ ಮೂರು ವರ್ಷಗಳು ಶ್ರಮ ಹಾಕಿ ತಯಾರಾಗಿರುವ ಸಿನಿಮಾ ಪೊಗರು. ಮೈಯಲ್ಲಿ ಪೊಗರು ತುಂಬಿರುವ ಶಿವ ಇಷ್ಟರಲ್ಲಿ ಥಿಯೇಟರ್ ಅಂಗಳದಲ್ಲಿ ಅಬ್ಬರಿಸಿ ಬೊಬ್ಬಿರಿಯಬೇಕಿತ್ತು. ಆದ್ರೆ ಕೊರೋನಾ ಲಾಕ್ ಡೌನ್, ಸೀಲ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕ್ತು. ಇನ್ನೇನು ಡಿಸೆಂಬರ್ ನಲ್ಲಿ‌ ಪೊಗರು ಖದರ್ ಶುರುವಾಗ್ಬೇಕಿತ್ತು. ಅದ್ಯಾಕೋ ಚಿತ್ರತಂಡ ಜನವರಿಗೆ ಸಿನಿಮಾ ರಿಲೀಸ್ ಮಾಡೋ‌ ಪ್ಲಾನ್ ಹಾಕಿಕೊಳ್ತು.

https://fb.watch/2ohhQaSpwd/

ಆದರೆ ಪೊಗರು ಖದರ್ ಥಿಯೇಟರ್ ಅಂಗಳದಲ್ಲಿ ಶುರುವಾಗಿಲ್ಲ ಅಂದ್ರೇನಾಯ್ತು ಸೋಷಿಯಲ್ ಮೀಡಿಯಾದಲ್ಲಂತೂ ಖರಾಬು ಗುಂಗು ಕಿಕ್ ಕೊಡ್ತಿದೆ. ಚಂದನ್ ಶೆಟ್ಟಿ ಮ್ಯೂಸಿಕ್ ,ಲಿರಿಕ್ಸ್, ವಾಯ್ಸ್ , ಧ್ರುವ ಸರ್ಜಾ ಸ್ಟೆಪ್ಸ್ ಇರುವ ಖರಾಬು ಸಾಂಗ್ ಕಮಾಲ್ ಮಾಡ್ತಿದೆ. ಈಗಾಗ್ಲೇ 175 ಮಿಲಿಯನ್ಸ್ ವೀವ್ಸ್ ಪಡೆದು ಮುನ್ನುಗ್ಗುತ್ತಿರುವ ಖರಾಬು ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಸಣ್ಣ ಮಕ್ಕಳು, ಯುವಕರು ಪ್ರತಿಯೊಬ್ಬರ ಬಾಯಲ್ಲೂ ಗುನುಗುಡುವ ಖರಾಬು ಹಾಡಿಗೆ ಕೋಲೆ ಬಸವ ಸಹ ಫಿದಾ ಆಗಿದೆ. ಈ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ರಿಂಗಣಿಸ್ತಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.

ಅಂದಹಾಗೇ ನಂದಕಿಶೋರ್ ಆ್ಯಕ್ಣನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

-ಮೇಘ.ಎಸ್

- Advertisement -

Latest Posts

Don't Miss