Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿ ಮತ್ತು ಕಮಲಶಿಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಆದರೆ ಅದಾದ ಕೆಲವೇ ದಿನಗಳಲ್ಲಿ ಜಾನಕಮ್ಮ ಬಹು ಅಂಗಾಂಗ ವೈಫಲ್ಯದಿಂದ ಬಳಸಿ, ಮೈಸೂರಿನ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಜಾನಕಮ್ಮನ ನಿಧನಕ್ಕೆ ರಾಜಕೀಯ ಗಣ್ಯರು, ಸಿನಿಮಾ ತಾರೆಯರು, ಸಂಗೀತ ದಿಗ್ಗಜರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಭಾನುವಾರದಂದು ದತ್ತುಪುತ್ರನ ಮಗಳಾದ ಅಪ್ಸರಾ ಅವರಿಂದ ತೆಲುಗು ಬ್ರಾಹ್ಮಣ ಸಂಪ್ರಾಯದಂತೆ ಎಸ್.ಜಾನಕಿಯವರ ಅಂತ್ಯಕ್ರಿಯೆ ಮೈಸೂರಿನಲ್ಲಿ ನಡೆಯಲಿದೆ. ಅದಕ್ಕೂ ಸಾರ್ವಜನಕರಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

About The Author