www.karnatakatv.net : ಬೆಂಗಳೂರು : ಕೊರೊನಾ ಮಹಾಮಾರಿಯ ಮೂರನೇ ಅಲೆಯ ಆತಂಕದೊಂದಿಗೆ ರಾಜ್ಯದಲ್ಲಿ ಶಾಲೆ ಕಾಲೇಜುಗಳನ್ನು ಆರಂಭಿಸಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಅರಿತು ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಿರಲಿಲ್ಲ. ಆದರೆ ಈಗ ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ.
ಹೌದು, ರಾಜ್ಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಯೋಚಿಸಿ 1 ರಿಂದ 5ನೇ ತರಗತಿಯ ವರೆಗೂ ಆರಂಭಿಸಿರಲಿಲ್ಲ. ಆದರೆ ಈಗ ದಸರಾ ರಜೆ ಮೂಗಿದ ಬಳಿಕ ಆರಂಭಿಸುವದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಹಾಗೂ ಕೋವಿಡ್ ಉಸ್ತುವಾರಿಗಳು, ತಜ್ಞರ ಜೊತೆಗೆ ಸಭೆ ನಡೆಸಲಾಗುತ್ತದೆ. ತದನಂತರ 1 ರಿಂದ 5ನೇ ತರಗತಿ ಆರಂಭಕ್ಕೆ ಮನವಿ ಮಾಡಲಾಗುತ್ತದೆ. ಆದ್ರೇ ರಾಜ್ಯದಲ್ಲಿ ಡೆಂಗ್ಯೂ, ವೈರಲ್ ಫೀವರ್ ಇರುವದರಿಂದ, ಸದ್ಯಕ್ಕೆ 3 ರಿಂದ 5ನೇ ತರಗತಿ ಆರಂಭ ಕುರಿತಂತೆ ಮನವಿ ಮಾಡೋದಾಗಿ ತಿಳಿಸಿದರು.
ದಸರಾ ರಜೆಯ ಬಳಿಕ 1 ರಿಂದ 5ನೇ ತರಗತಿ ಆರಂಭ ಕುರಿತಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನವೆಂಬರ್ ನಿಂದ 1, 2ನೇ ತರಗತಿ ಆರಂಭ ಕುರಿತಂತೆ ತಯಾರಿ ನಡೆಸಲಾಗುತ್ತಿದೆ. ಇದೇ ವರ್ಷ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ದಸರಾ ರಜೆಯ ಬಳಿಕ 3, 4 ಮತ್ತು 5ನೇ ತರಗತಿ ಆರಂಭಿಸೋ ಚಿಂತನೆ ಇದೆ. ಈ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಬೇಕಿದೆ ಎಂದರು.
ಕರ್ನಾಟಕ ಟಿವಿ- ಬೆಂಗಳೂರು