ಬೆಂಗಳೂರು: ಸ್ಪೀಕರ್ ವಿಚಾರಣೆಗೆಂದು ಖುದ್ದು ಹಾಜರಾಗುವಂತೆ ನೋಟೀಸ್ ಪಡೆದಿದ್ದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಗೈರಾಗಿದ್ದಾರೆ. ಅಲ್ಲದೆ ತಮ್ಮ ಪರ ವಕೀಲರನ್ನು ಸ್ಪೀಕರ್ ಭೇಟಿಗೆಂದು ಕಳುಹಿಸಿದ್ದಾರೆ.
ಅತೃಪ್ತ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿಯವರಿಗೆ ಇಂದು ಸ್ಪೀಕರ್ ಬೆಳಗ್ಗೆ 11 ಗಂಟೆಯೊಳಗೆ ಖುದ್ದು ಹಾಜರಾಗುವಂತೆ ನಿನ್ನೆ ನೋಟೀಸ್ ನೀಡಿದ್ದರು. ಆದರೆ ಇದೀಗ ತಾವು ಖುದ್ದಾಗಿ ಹಾಜರಾಲು ಹಿಂದೇಟು ಹಾಕಿರುವ ಕಾಂಗ್ರೆಸ್ ನ ಈ ಇಬ್ಬರು ಅತೃಪ್ತ ಶಾಸಕರು ತಮ್ಮ ಪರ ವಕೀಲರನ್ನು ಸ್ಪೀಕರ್ ಭೇಟಿಗೆಂದು ಕಳುಹಿಸಿದ್ದಾರೆ. ಈ ಮೂಲಕ ನಾವು ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರದ ಪರ ಇಲ್ಲವೇ ಇಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಇನ್ನು ಇಂದಿನ ಕಾರ್ಯಕಲಾಪದಲ್ಲಿ ತೊಡಗಿದ್ದ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅತೃುಪ್ತರ ಪರ ವಕೀಲರನ್ನು ಭೇಟಿಯಾಗಲು ಸದನದಿಂದ ನಿರ್ಗಮಿಸಿದ್ರು. ಇದೀಗ ಅತೃಪ್ತ ಶಾಸಕರ ಪರ ವಕೀಲರಾದ ಅಶೋಕ್ ಹಾರನಹಳ್ಳಿ ಸ್ಪೀಕರ್ ರಮೇಶ್ ಕುಮಾರ್ ಎದುರು ವಾದ ಮಂಡನೆಯಲ್ಲಿ ತೊಡಗಿದ್ದಾರೆ.