ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ಮೇಷ ರಾಶಿ

 

 

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಈ ವರ್ಷ ಮೇಷ ರಾಶಿಯವರಿಗೆ ಯಾವ ರೀತಿ ಫಲಾಫಲಗಳಿದೆ ಅಂತಾ ತಿಳಿಯೋಣ ಬನ್ನಿ..

ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ಅಭಿವೃದ್ಧಿಯಾಗಲಿದೆ. ಆದರೆ ಮೇಷ ರಾಶಿಯವರು ಕೋಪ ಕಡಿಮೆ ಮಾಡಿದರೆ ಉತ್ತಮ. ಕೋಪದಿಂದಲೇ ಇವರ ಅದೃಷ್ ಅಭಿವೃದ್ಧಿಎಲ್ಲವೂ ಕಡಿಮೆಯಾಗುವ ಸಂಭವವಿದೆ. ಹ ಹಾಗಾಗಿ ಮೇಷ ರಾಶಿಯವರು ಕೋಪ ಕಡಿಮೆ ಮಾಡಬೇಕಿದೆ.

ಹಣಕಾಸಿನ ವಿಷಯದಲ್ಲಿ ಮೇಷ ರಾಶಿಯವರಿಗೆ ಅತ್ಯುತ್ತಮ ಲಾಭವೇ ಬರಲಿದೆ. ಸಂಸಾರದಲ್ಲಿ ಕೂಡ ಖುಷಿ ಇರಲಿದೆ. ಆದರೆ ಮೇಷ ರಾಶಿಯವರು ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕಿದೆ. ಇನ್ನು ಮೇಷ ರಾಶಿಯವರು ಪ್ರತೀ ಮಂಗಳವಾರ ಹನುಮಾನ್ ಚಾಲೀಸಾ ಹೇಳಬೇಕು. ಅಥವಾ ಕುಜಗ್ರಹ ಮಂತ್ರ ಜಪಿಸಬೇಕು. ಓಂ ಕುಜಗ್ರಹಾದಿಪತಯೇ ನಮಃ ಎಂಬ ಮಂತ್ರ ಹೇಳಬೇಕು.

ಲಕ್ಷ್ಮೀ ನರಸಿಂಹ ದೇವರಿಗೆ ಅಥವಾ ಸುಬ್ರಹ್ಮಣ್ಯ ದೇವರಿಗೆ ಕೆಂಪು ಹೂವು ಅರ್ಪಣೆ ಮಾಡಬೇಕು. ಇವರಿಗೆ ಮಂಗಳವಾರ ಮತ್ತು ಭಾನುವಾರ ಶುಭದಿನ. ಇನ್ನು ಲಕ್ಕಿ ನಂಬರ್, 3 ಮತ್ತು 9.

About The Author