Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ವೃಷಭ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ವೃಷಭ ರಾಶಿಯವರು ಈ ವರ್ಷ ಹೆಚ್ಚು ದುಡಿಯಬೇಕು. ಹೆಚ್ಚು ದುಡಿದಷ್ಟು ಹೆಚ್ಚು ಫಲ ಸಿಗಲಿದೆ. ಇನ್ನು ಈ ಮುಂಚೆ ನೀವು ಹೂಡಿಕೆ ಮಾಡಿದ್ದರೆ, ಈ ವರ್ಷ ಅವರಿಗೆ ಲಕ್ ಅಂತಾನೇ ಹೇಳಬಹುದು. ಅಲ್ಲದೇ, ಈ ವರ್ಷ ಕೂಡ ಚೆನ್ನಾಗಿ ಹೂಡಿಕೆ ಮಾಡಬಹುದು. ಉದ್ಯಮದಲ್ಲೂ ಅತ್ಯುತ್ತಮ ಲಾಭವಾಗಲಿದೆ. ವಿವಾಹ ಭಾಗ್ಯ ಕೂಡಿ ಬರಲಿದೆ.
ಆದರೆ ಲಕ್ಷ್ಮೀಯನ್ನು ಉತ್ತಮವಾಗಿ ಆರಾಧನೆ ಮಾಡಿದರೆ, ಹಣಕಾಸಿನ ವಿಚಾರದಲ್ಲೂ ಅನುಕೂಲವಾಗಲಿದೆ. ಇವರ ಲಕ್ಕಿ ನಂಬರ್ 2 ಮತ್ತು 6. ಲಕ್ಕಿ ಕಲರ್ ಹಸಿರು. ಶುಭ ದಿನ ಶುಕ್ರವಾರ ಮತ್ತು ಸೋಮವಾರ.




