Friday, May 17, 2024

Latest Posts

30 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ 23ರ ಹರೆಯದ ಮಿನ್ನು ಮನಿ…!

- Advertisement -

sports news

ಬೆಂಗಳೂರು(ಫೆ.14): ಕನ್ನಡತಿ ಸ್ಮೃತಿ ಮಂಧಾನ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾದರೆ, ಇನ್ನು 23 ವರ್ಷ ಪ್ರಾಯದ ಕೇರಳದ ಕ್ರಿಕೆಟ್ ಆಟಗಾರ್ತಿ, ಆಲ್ರೌಂಡರ್ ಮಿನ್ನು ಮನಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 30 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿತು.

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್​ನಲ್ಲಿ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಹಣ ಮಳೆಯೇ ಸುರಿಯಿತು. ಒಟ್ಟು 409 ಆಟಗಾರ್ತಿಯರ ಪೈಕಿ 87 ಪ್ಲೇಯರ್ಸ್ ಸೋಲ್ಡ್ ಔಟ್ ಆದರು. ಐದು ಫ್ರಾಂಚೈಸಿ 59.50 ಕೋಟಿ ರೂಪಾಯಿಯನ್ನು ಖರ್ಚು ಮಾಡಿತು. ಇನ್ನು ಈ ಕ್ರಿಕೆಟ್ ಬೆಡಗಿ ಮೂಲತಃ ಕೇರಳದವರಾಗಿದ್ದು, ಉತ್ತಮ ಆಟಗಾರ್ತಿಯಾಗಿದ್ದಾರೆ.

ಇನ್ನು ಈಕೆ ಸಣ್ಣ ವಯಸ್ಸಿನಲ್ಲಿ ಹುಡುಗರ ಜೊತೆಗೂಡಿ ಗ್ರಾಮದಲ್ಲಿ ಕ್ರಿಕೆಟ್ ಆಡುತ್ತಿದ್ದರಂತೆ. ನಂತರ, ಇವರ ಪ್ರತಿಭೆಯನ್ನು ಗುರುತಿಸಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎಲ್ಸಮ್ಮ ಬೇಬಿ ಹೆಚ್ಚಿನ ಪ್ರೋತ್ಸಾಹ ನೀಡಿದರು. ಎಲ್ಸಮ್ಮ ಅವರ ಮಗಳು ಅನುಮೋಲ್ ಬೇಬಿ ಕೇರಳದ ರಾಜ್ಯ ಮಟ್ಟದ ಆಟಗಾರ್ತಿ ಆಗಿದ್ದರು. ಹೀಗಾಗಿ ಅನುಮೋಲ್ ಅವರು ಮಿನ್ನು ಅವರ ಮೊದಲ ತರಬೇತುದಾರರಾದರು.

- Advertisement -

Latest Posts

Don't Miss