Hubli: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೆಎಸ್‌ಸಿಎ ಆಶ್ರಯದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ-2026 ಟಿ20 ಟೂರ್ನಿಯ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ಹಾಗೂ ಮಾಜಿ ಟೀಂ ಇಂಡಿಯಾ ಆಟಗಾರ ವೆಂಕಟೇಶ ಪ್ರಸಾದ್ ಅವರು ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನವನ್ನು ವೀಕ್ಷಣೆ ಮಾಡಿದರು.
ಮಹಾರಾಜ ಟ್ರೋಫಿ-2026 ಟಿ20 ಟೂರ್ನಿಯ ಎರಡನೇ ಹಂತದ ಪಂದ್ಯಗಳು ಜೂನ್ 27 ರಿಂದ ಜುಲೈ 3 ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್ ಅವರು ಮೈದಾನದ ಮೂಲಭೂತ ಸೌಕರ್ಯಗಳು ಹಾಗೂ ಒಟ್ಟಾರೆ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ವೇಳೆ ಶ್ರೀದುರ್ಗಾ ಪ್ರಾಪರ್ಟೀಸ್ ಮಾಲೀಕ ವಿರೇಶ್ ಉಂಡಿ ಹಾಗೂ ಕನ್ವೇನರ್ ವೀರಣ್ಣ ಸವಡಿ ಅವರು ಅವರೊಂದಿಗೆ ಉಪಸ್ಥಿತರಿದ್ದರು.
ಮೈದಾನದ ಸುತ್ತಲೂ ಸಂಚರಿಸಿ ಪಿಚ್ ಗುಣಮಟ್ಟ, ಆಟಗಾರರಿಗೆ ಬೇಕಾದ ಸೌಲಭ್ಯಗಳು ಹಾಗೂ ಪಂದ್ಯ ಆಯೋಜನೆಗೆ ಅಗತ್ಯ ವ್ಯವಸ್ಥೆಗಳ ಕುರಿತು ಅವರು ಸಮಾಲೋಚನೆ ನಡೆಸಿದರು.
ಹುಬ್ಬಳ್ಳಿಯಲ್ಲಿ ಒಟ್ಟು 12 ಮಹಾರಾಜ ಟ್ರೋಫಿ ಪಂದ್ಯಗಳು ನಡೆಯಲಿದ್ದು, ಅದರಲ್ಲಿ 4 ಪಂದ್ಯಗಳು ಹುಬ್ಬಳ್ಳಿ ಟೈಗರ್ಸ್ ತಂಡದಾಗಿರುತ್ತವೆ.
ಇದೇ ವೇಳೆ ಮೈದಾನದಲ್ಲಿ ಪ್ರಖರ ಬೆಳಕು ಬೀಳುವ ಉದ್ದೇಶದಿಂದ ಅಳವಡಿಸಲಾಗುತ್ತಿರುವ ಎಲ್‌ಇಡಿ ಫ್ಲಡ್‌ಲೈಟ್ಸ್ ಕಾರ್ಯವೈಖರಿಯನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.




