ಸ್ಕ್ರಬ್ ಟೈಫಸ್ ಗೆ ಕೇರಳದಲ್ಲಿ 2ನೇ ಸಾವು..!

ಕಾಸರಗೋಡು: 38 ವರ್ಷದ ಮಹಿಳೆಯೊಬ್ಬರನ್ನು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸ್ಕ್ರಬ್ ಟೈಫಸ್( ಚಿಗಟೆ ಜ್ವರ ) ನಿಂದಾಗಿ ಕೇರಳದಲ್ಲಿ ಇದು ಎರಡನೇಯ ಸಾವು. ಮೂರು ದಿನಗಳ ಹಿಂದೆ ಕೇರಳದಲ್ಲಿ ಮೊದಲ ಬಾರಿಗೆ 15 ವರ್ಷದ ಬಾಲಕಿ ಇದೇ ಜ್ವರ ಬಾಧಿಸಿ ಮೃತಪಟ್ಟಿದ್ದರು.

ತಿರುವನಂತಪುರದ ಸುಬಿತಾ ಅವರನ್ನು ಜೂನ್ 10ರಂದು ಜ್ವರ ಬಾಧಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಯಾವುದೇ ರೀತಿಯ ಪ್ರಕರಣಗಳಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಕ್ರಬ್ ಟೈಫಸ್ ರೋಗವನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ ಮತ್ತು ಸೋಂಕಿತ ಚಿಗಟೆಗಳ ಸಂಪರ್ಕವನ್ನು ತಪ್ಪಿಸವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು.

 

About The Author