www.karnatakatv.net :23 ರಾಜ್ಯಗಳಿಗೆ ಮುಂಚಿತವಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯ 2ನೇ ಕಂತನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಹೌದು, ಇಂದು ಕೇಂದ್ರ ಸರ್ಕಾರ 23 ರಾಜ್ಯಗಳಿಗೆ ಮುಂಗಡವಾಗಿ 7,274.40 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡಲು ಕೇಂದ್ರ ಅನುಮತಿ ಕೊಟ್ಟಿದೆ. ಯಾವುದೇ ವಿಪತ್ತಿನಿಂದ ಉಂಟಾಗುವ ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ತಮ್ಮ ಎಸ್ ಡಿ ಆರ್ ಎಫ್ ನಲ್ಲಿ ಸಾಕಷ್ಟು ಹೊಂಡಿರಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
5 ರಾಜ್ಯಗಳಿಗೆ ಈಗಾಗಲೇ ಹಣವನ್ನು ಬಿಡುಗಡೆ ಮಾಡಲಾಗಿದೆ. ಹಾಗೇ 2ನೇ ಕಂತಿನ 1599 ಕೋಟಿ ಬಿಡುಗಡೆ ಮಾಡಿರುವದಾಗಿ ತಿಳಿದುಬಂದಿದೆ. ಎಸ್‌ಡಿಆರ್‌ಎಫ್ ಅಡಿಯಲ್ಲಿ ನೆರವು ನೀಡಲು ಮಾನದಂಡಗಳನ್ನು ಪರಿಷ್ಕರಿಸಿ ಕೊರೊನಾ ಸೋಂಕಿನಿಂದ ಮೃತಪಟ್ಟ ಸಂಬಂಧಿಗಳಿಗೆ ಪರಿಹಾರ ನೀಡುವ ಅವಕಾಶವನ್ನು ನೀಡಿದೆ. ಜೂನ್ 30ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಅನುಸಾರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೆ. 11ರಂದು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ಎಸ್‌ಡಿಆರ್‌ಎಫ್ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.