www.karnatakatv.net: ದೇಶದ ವಾಯವ್ಯ ಭಾಗದ 37,000 ಜನರು ಮನೆಯನ್ನು ತೊರೆದು ಭಾರತಕ್ಕೆ ಪಲಾಯನ ಮಾಡಿರುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಮ್ಯಾನ್ಮಾರ್ ನಲ್ಲಿ ಆಂತರಿಕ ಸಂಘರ್ಷ ಮತ್ತೆ ಹೆಚ್ಚುವ ಆತಂಕದಿoದ ಅಧಿಕ ಸಂಖ್ಯೆಯ ಜನರು ಭಾರತಕ್ಕೆ ಪಲಾಯನ ಮಾಡಿದ್ದಾರೆ. ‘ದೇಶದ ವಾಯವ್ಯ ಭಾಗದಲ್ಲಿ ಮ್ಯಾನ್ಮಾರ್ ಮಿಲಿಟರಿ ಹಾಗೂ ಸ್ಥಳೀಯ ಪಾಪ್ಯುಲರ್ ಡಿಫೆನ್ಸ್ ಫೋರ್ಸ್ ನಡುವೆ ಇತ್ತೀಚೆಗೆ ಕದನ ಶುರುವಾಗಿದ್ದು, ಇದು ಹೆಚ್ಚಾಗುವ ಆತಂಕ ಇದೆ. ಇದರಿಂದಾಗಿ ಚಿನ್, ಮ್ಯಾಗ್ವೆ ಹಾಗೂ ಸಗಾಯಿಂಗ್ ರಾಜ್ಯಗಳಲ್ಲಿನ ಪರಿಸ್ಥಿತಿ ಕಳವಳಕಾರಿಯಾಗಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ಸಹವಕ್ತಾರರಾದ ಫ್ಲಾರೆನ್ಸಿಯಾ ಸೊಟೊ ನಿನೊ ಹೇಳಿದ್ದಾರೆ.
‘ಈ ಸಂಘರ್ಷದ ಪರಿಣಾಮವಾಗಿ ಜನರು ಮನೆಗಳನ್ನು ತೊರೆದು, ಸುರಕ್ಷಿತ ತಾಣಗಳನ್ನು ಅರಸಿ ಓಡಿ ಹೋಗುತ್ತಿದ್ದಾರೆ. ಆಸ್ತಿಗಳಿಗೆ ಹಾನಿಯುಂಟಾಗಿದೆ. ಪಶ್ಚಿಮ ಚಿನ್ ರಾಜ್ಯದ ಥತ್ಲಾಂಗ್ ಪಟ್ಟಣದಲ್ಲಿ 160ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿರುವ ಆತಂಕಕಾರಿ ಘಟನೆ ನಡೆದಿದೆ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 37,000 ಜನರು ಮನೆಗಳನ್ನು ತೊರೆದಿದ್ದಾರೆ. 2019ರಲ್ಲಿ ಕಂಡು ಬಂದ ಮಿಲಿಟರಿ ದಂಗೆ ಹಾಗೂ ನಂತರದ ಸಂಘರ್ಷದಿAದಾಗಿ ಆಗ 7 ಸಾವಿರಕ್ಕೂ ಅಧಿಕ ಜನರು ಮನೆಗಳನ್ನು ತೊರೆದಿದ್ದರು’ ಎಂದು ಹೇಳಿದ್ದಾರೆ.