www.karnatakatv.net: ದೇವರ ನಾಡು ಕೇರಳ ಪ್ರವಾಸೋದ್ಯಮದಲ್ಲಿ ಎಷ್ಟು ಹೆಸರುವಾಸಿಯೊ ಅಷ್ಟೇ ಪ್ರಕೃತಿಯ ಅನಾಹುತಗಳಿಗೂ ಕೂಡಾ. ಕೇರಳದಲ್ಲಿ ವರ್ಷದಿಂದ ವರ್ಷಕ್ಕೆ ಒಂದಲ್ಲಾ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ, ಈ ವರ್ಷವೂ ಕೂಡ ಅಂತಹದ್ದೇ ಪ್ರಕೃತಿಯ ವಿಕೋಪ ಮನೆಮಾತಾಡುತ್ತಿದೆ. ಈ ವರ್ಷ ಕೇರಳದ ಮೇಲೆ ಮತ್ತೆ ಕೆಂಗಣ್ಣು ಬಿಟ್ಟಿದ್ದಾನೆ ಮಳೆರಾಯ.
ಅ.11 ರಂದು ಸುರಿಯುತ್ತಿರುವ ಮಹಾ ಮಳೆಗೆ ಜೀವ ಕೈನಲ್ಲಿ ಹಿಡಿದು ಬದುಕುತ್ತಿದ್ದಾರೆ ಕೇರಳದ ಜನ. ಅದೇ ರೀತಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತಗಳು ಮತ್ತು ದಿಡೀರ್ ಪ್ರವಾಹಗಳಲ್ಲಿ ಒಟ್ಟು 39 ಜನರು ಪ್ರಾಣ ಕಳೆದುಕೊಂಡಿದ್ದಾರೆ . ಮತ್ತು 217 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ನಾಪತ್ತೆಯಾದ ಕನಿಷ್ಟ ಆರು ಜನರನ್ನು ಇನ್ನೂ ಪತ್ತೆಮಾಡಬೇಕಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ ಅನಿರೀಕ್ಷಿತ ದುರಂತವು ಸಂತ್ರಸ್ಥರ ಕುಟುಂಬಗಳಿಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ದುಖಃ ತಂದಿದೆ ಎಂದಿದ್ದಾರೆ , ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳನ್ನು ಕೈ ಬಿಡುವುದಿಲ್ಲ ಮತ್ತು ರಕ್ಷಣಾ ಮತ್ತು ಪರಿಹಾರ ಕ್ರಮಗಳ ಮೂಲಕ ತನ್ನ ಕಾಳಜಿ ಮತ್ತು ಪರಿಗಣನೆಯನ್ನು ತೋರಿಸುತ್ತಿದೆ, ಮತ್ತು ಜೀವನೋಪಾಯಕ್ಕೆ ಮತ್ತೆ ದಾರಿ ಮಾಡಿಕೊಡುತ್ತದೆ ಎಂದು ಪಿಣರಾಯಿ ಹೇಳಿದ್ದಾರೆ. ಅ.11 ರಿಂದ ಅತಿಯಾದ ಮಳೆಯು ಬೀಕರ ಪ್ರವಾಹವನ್ನು ಉಂಟು ಮಾಡಿ ಅ.18 ಮತ್ತು 19 ರಂದು ಅದರ ತೀವ್ರತೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಎಂದು ಸಿಎಂ ಹೇಳಿದ್ದಾರೆ, ಹಾಗೆ ರಾಜ್ಯಾದ್ಯಂತ 3851 ಕುಟುಂಬಗಳನ್ನು 304 ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಮಾಧ್ಯಮದವರೊಂದಿಗೆ ಮಾತನಾಡಿದ ಪಿಣರಾಯ್ ಕೇರಳದ ಪ್ರಮುಖ ಪ್ರದೇಶಗಳಲ್ಲಿ ಒಟ್ಟು 11 ಎನ್ ಡಿ ಅರ್ ಎಫ್ ತಂಡಗಳು ಶ್ರಮವಹಿಸಿ ಸೇವೆ ಸಲ್ಲಿಸುತ್ತಿವೆ ,ಭಾರತೀಯ ಸೇನೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಬಾಗವಹಿಸುತ್ತಿದ್ದಾರೆ ಮತ್ತು ವಾಯುಪಡೆ ಮತ್ತು ನೌಕಾ ಪಡೆಯ ಎಲಿಕ್ಯಾಪ್ಟರ್ ಗಳು ಯಾವುದೇ ಕಾರ್ಯಾಚರಣೆಗೆ ಸಜ್ಜಾಗಿವೆ ಎಂದು ತಿಳಿಸಿದ್ದಾರೆ. ಅ.20 ರಿಂದ ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಎರಡು ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಅದಕ್ಕೆ ತಕ್ಕಂತೆ ಎಚ್ಚರಿಕೆಗಳನ್ನು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಹಾಗು ಜಿಲ್ಲಾಡಳಿತ ಮತ್ತು ಆಯಾ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ತಿಳಿಸಿದ ನಂತರ ಅಣೆಕಟ್ಟುಗಳಲ್ಲಿ ನೀರನ್ನು ನಿಯಂತ್ರಿತ ರೀತಿಯಲ್ಲಿ ಬಿಡಲಾಗುತ್ತದೆ. ಧಾರಾಕಾರಾ ಮಳೆಯನ್ನು ಎದುರಿಸಲು ಎಲ್ಲರ ಬೆಂಬಲವನ್ನು ಸಿ ಎಂ ಪಿಣರಾಯ್ ಕೇಳಿದ್ದಾರೆ.
ಸಂಪತ್ ಶೈವ , ನ್ಯೂಸ್ ಡೆಸ್ಕ್ -ಕರ್ನಾಟಕ ಟಿವಿ