- Advertisement -
ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ವಿಕಾಸ ನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಾನು ದುಡಿದ ಹಣ ಕೇಳಿದ್ದಕ್ಕೆ, ಮಾಲೀಕ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾನಂತೆ. ಮತ್ತೊಂದು ಘಟನೆ ಕಮರಿಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೊರವಿಹಕ್ಕಲ ಏರಿಯಾದಲ್ಲಿ, ಮನೆಗಳಿಗೆ ತೆರಳಿ ಜನರ ಮೇಲೆ ರೌಡಿಗಳು ಹಲ್ಲೆ ಮಾಡಿದ್ದಾರೆ. ಏರಿಯಾದಲ್ಲಿ ಹಿಡಿತ ಸಾಧಿಸಲು ಅಕ್ಕ ಪಕ್ಕದ ನಿವಾಸಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ರಾತ್ರಿ ವೇಳೆ ಮನೆಯ ಕದ ಬಡಿಯುತ್ತಾರಂತೆ ಮತ್ತು ಸಾರ್ವಜನಿಕರ ಮೇಲೆ ದಾದಾಗಿರಿ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ. ರೌಡಿಗಳ ದಾಳಿಗೆ ಹೆದರಿ, ಇಡೀ ರಾತ್ರಿ ಪೊಲೀಸ್ ಠಾಣೆ ಎದುರು ಕಾಲ ಕಳೆಯುವಂತಾಗಿದೆ.
- Advertisement -

