ಅಪ್ರಾಪ್ತನಿಂದ ಕಾರು ಅಪಘಾತ, ನಾಲ್ವರು ಮಹಿಳೆಯರ ಸಾವು..

ತೆಲಂಗಾಣದಲ್ಲಿ ಅಪ್ರಾಪ್ತನೊಬ್ಬ ಕಾರು ಚಲಾಯಿಸಲು ಹೋಗಿ, ಅಪಘಾತ ಮಾಡಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ತೆಲಂಗಾಣದ ಕರೀ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತನ ವಿರುದ್ಧ ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಯಸ್ಸು18 ತುಂಬದಿದ್ದಲ್ಲಿ, ವಾಹನಕ್ಕೆ ಲೈಸನ್ಸ್ ಕೊಡಲಾಗುವುದಿಲ್ಲ. ಮತ್ತು ಲೈಸೆನ್ಸ್ ಇಲ್ಲದೇ, ಕಾರು ಚಲಾಯಿಸುವುದು, ಕಾನೂನು ಬಾಹಿರ ಕೆಲಸವಾಗಿದೆ. ಆದರೂ ಕೂಡ ಅಪ್ರಾಪ್ತ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದು, ಜೋರಾಗಿ ಕಾರ್ ಚಲಾಯಿಸಿದ ಕಾರಣ, ಫುಟ್‌ಪಾತ್‌ನಲ್ಲಿ ಮಲಗಿದ್ದ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಇನ್ನು ಕಾರಿನಲ್ಲಿ 2ರಿಂದ 3 ಜನ ಅಪ್ರಾಪ್ತರಿದ್ದರು. ಸದ್ಯ ಇವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕರೀಂನಗರದ ಪೊಲೀಸ್ ಆಯುಕ್ತ, ವಿ. ಸತ್ಯನಾರಾಯಣ್ ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author