www.karnatakatv.net : ರಾಯಚೂರು : ಮರಗಳನ್ನು ಬೇರು ಸಮೇತ ಕಿತ್ತು ಬೇರೆ ಕಡೆಗೆ ನೆಡಬಹುದು. ಆದರೆ, ನೆಲಮಟ್ಟದ ಮನೆಯನ್ನು ಕೆಡವದೇ 4 ಅಡಿ ಎತ್ತರ ಮಾಡಿರುವುದನ್ನು ನೀವು ಎಲ್ಲಾದರು ನೋಡಿದ್ದಿರಾ..?
ಹೌದು, ರಾಯಚೂರು ನಗರದ ಜವಾಹರ್ ನಗರದಲ್ಲಿರುವ ಸತ್ಯನಾರಾಯಣ ಮಜುಮದಾರ್ ಎಂಬುವವರು ಮನೆಯನ್ನು ಎತ್ತರಕ್ಕೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.
1990-91ರಲ್ಲಿ ರಾಯಚೂರಿನ ಜವಾಹರ ನಗರದಲ್ಲಿ ಈ ಮನೆಯನ್ನು ನಿರ್ಮಿಸಲಾಗಿತ್ತು. ರಸ್ತೆ ಪಕ್ಕದಲ್ಲಿಯೇ ಮನೆ ಇರುವುದರಿಂದ ದಿನ ಕಳೆದಂತೆ ಮನೆಗಿಂತ ರಸ್ತೆಯೇ ಎತ್ತರ ಆಗಿದೆ. ಇದರಿಂದ ಪ್ರತಿ ಮಳೆಗಾಲದಲ್ಲೂ ರಸ್ತೆ ಮತ್ತು ಚರಂಡಿ ನೀರು ಮನೆಯ ಅಂಗಳಕ್ಕೆ ನುಗ್ಗಿ ದುರ್ವಾಸನೆ ಬರುತ್ತಿತ್ತು. ಇದರಿಂದ ಬೇಸತ್ತ ಸತ್ಯನಾರಾಯಣ ಅವರು ಮನೆಯನ್ನು ಎತ್ತರ ಮಾಡಲು ಮುಂದಾಗಿದ್ದಾರೆ.
ಹೌದು ಮನೆಯನ್ನು ಕೆಡವಿ ಮತ್ತೆ ಕಟ್ಟಲು 30 ರಿಂದ 40 ಲಕ್ಷ ರೂಪಾಯಿ ಬೇಕು. ಅಷ್ಟೊಂದು ಹಣ ಎಲ್ಲಿಂದ ತರೋದು ಅಂತಾ ಯೋಚನೆ ಮಾಡುತ್ತಿರುವಾಗ ಮೊಬೈಲ್‌ನಲ್ಲಿ ಬಂದ ಒಂದು ಸಂದೇಶ ಈ ರೀತಿ ಮನೆ ಲಿಫ್ಟಿಂಗ್‌ಗೆ ಕಾರಣವಾಗಿದೆ. ಅಂತಾರೆ. ಸತ್ಯನಾರಾಯಣ ಮುಜುಂದಾರ..
ಈ ಮೊದಲು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಇದೇ ರೀತಿ ಮನೆಯನ್ನು 4 ಅಡಿ ಎತ್ತರಕ್ಕೆ ಮಾಡಿರುವುದನ್ನು ನೋಡಿ ಬಿಹಾರ ಮೂಲದ ಸಂತೋಷ ಎಂಬುವವರನ್ನು ಸಂಪರ್ಕ ಮಾಡಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಇನ್ನು, ಮನೆಗೆ ಯಾವುದೇ ಸಮಸ್ಯೆಯಾಗದಂತೆ ಸುತ್ತಲೂ ಜಾಕ್ ಹಾಕುವ ಮೂಲಕ 4 ಅಡಿ ಎತ್ತರ ಮಾಡಲಾಗಿದ್ದು, ಉಳಿದ ದುರಸ್ಥಿ ಕಾರ್ಯಗಳು ನಡೆಯುತ್ತಿವೆ. ಈ ಮನೆಯನ್ನು ನೋಡಲು ದಿನನಿತ್ಯ ಸಾವಿರಾರು ಜನರು ಬಂದು ಹೋಗುತ್ತಿದ್ದು, ರಾಯಚೂರಿನ ಹಾಟ್ ಟಾಫಿಕ್ ಆಗಿದೆ. ಒಟ್ನಲ್ಲಿ ಬಡ ಮತ್ತು ಮದ್ಯಮ ವರ್ಗದವರ ಮನೆಗಳಿಗೆ ಈ ರೀತಿ ತೊಂದರೆಯಾದಲ್ಲಿ ಮನೆಗಳನ್ನ ಎತ್ತರಕ್ಕೇರಿಸಲು ಈ ಉಪಾಯ ಅತ್ಯಂತ ಸರಳವಾದುದು.
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು