Dharwad News: ಧಾರವಾಡದ ನವಲಗುಂದ ಹಾಗೂ ಗದಗ ನರಗುಂದ ರೈತ ಬಂಡಾಯದಲ್ಲಿ ಮಡಿದ ರೈತರ ನೆನಪಿನ ಸ್ಮಾರಕಕ್ಕೆ, ಹೂವಿನ ಹಾಕಿ ರೈತ ಒರ ಘೋಷಣೆ ಕೂಗುವ ಮೂಲಕ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.
ನವಲಗುಂದ ಪಟ್ಟಣದ ರೈತ ಭವನ ಪಕ್ಕದ ರೈತ ಹುತಾತ್ಮ ಸ್ಮಾರಕಕ್ಕೆ ರೈತ ಕೃಷಿಕ ಸಮಾಜ ಸಂಘದ ನವದೆಹಲಿ ಸಂಘದ ಪದಾಧಿಕಾರಿಗಳು ಸೇರಿದಂತೆ, ವಿವಿಧ ರೈತ ಪರ ಸಂಘಟನೆಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಸ್ಮಾರಕಕ್ಕೆ ಹೂವಿನ ಹಾರಗಳನ್ನು ಹಾಕಿ ರೈತ ಪರ ಘೋಷಣೆಗಳನ್ನು ಕೂಗು ಮೂಲಕ 44 ನೇಯ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಣೆ ಮಾಡಲಾಯಿತು.
ಈ ವೇಳೆ ರೈತ ಮುಖಂಡರು ಮಹದಾಯಿ ಜಾರಿಗೆ ಒತ್ತಾಯಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇನ್ನೂ ಇದೇವೇಳೆ ಮಾತನಾಡಿದ ರೈತ ಕೃಷಿಕ ಸಮಾಜದ ನವದೆಹಲಿ ಸಂಘದ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ, ಇಂದಿಗೇ ರೈತ ಮುಖಂಡರಾಗಿದ್ದ ಬಸಪ್ಪ ಲಕ್ಕುಂಡಿಯವರು ನವಲಗುಂದ ನರಗುಂದ ಬಂಡಾಯದಲ್ಲಿ ಹುತಾತ್ಮರಾಗಿ 44 ವರ್ಷಗಳು ಉರುಳಿವೆ. ಆದರೆ ಇಂದಿಗೂ ನಮ್ಮ ಈ ಭಾಗದ ರೈತರ ಭೂಮಿಗಳಿಗೆ ಇನ್ನೂ ನೀರು ಬಂದಿಲ್ಲ. ಮಹದಾಯಿ ಹೆಸರಿನ ಮೇಲೆ ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿರುವುದು ದುರಂತವಾಗಿದೆ.
ಇವರು ರೈತರ ಮೇಲೆ ಗೋರಿ ಕಟ್ಟವ ಕೆಲಸವನ್ನು ರಾಜಕೀಯ ನಾಯಕರುಗಳು ಸರ್ಕಾರಗಳ ಮಾಡುತ್ತಿರುವುದು ವಿಪರ್ಯಾಸವಾಗಿದೆ, ಉದನ್ನು ನಾವು ಖಂಡಿಸುತ್ತೇವೆ. ಈ ಕೂಡಲೇ ಈ ಭಾಗದ ಕೇಂದ್ರದಲ್ಲಿ ಎರಡನೇ ಬಾರಿಗೆ ಮಂತ್ರಿಯಾಗಿರೋ ಪ್ರಹ್ಲಾದ್ ಜೋಶಿಯವರು ಮಹದಾಯಿ ಸಮಸ್ಯೆಗಳನ್ನು ನಿವಾರಿಸಿ ನೀರು ನೀಡುವ ಕೆಲಸಕ್ಕೆ ಒತ್ತು ನೀಡಬೇಕು ಎಂದು ಅಗ್ರಹಿಸಿದರು. ಒಂದು ವೇಳೆ ನಿರ್ಲಕ್ಷ್ಯ ತೋರಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ರಾಜಕೀಯ ಭವಿಷ್ಯವನ್ನು ರೈತರು ನಿರ್ಧರಿಸುತ್ತಾರೆ ಎನ್ನುವ ಮೂಲಕ ಎಚ್ಚರಿಕೆ ನೀಡಿದರು.




