Athani News: ಅಥಣಿ: ಸಾಯಂಕಾಲ ಏಕಾಏಕಿ ಎರಡು ವಿದ್ಯುತ್ ಪರಿವರ್ತಕಗಳು ಬ್ಲಾಸ್ಟ್ ಆದ ಪರಿಣಾಮ ಬೆಂಕಿಯ ತೀವ್ರತೆಗೆ ವಿದ್ಯುತ್ ಪರಿವರ್ತಕದ ಕೆಳಗೆ ನಿಲ್ಲಿಸಿದ ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ.
ಅಥಣಿ ಪಟ್ಟಣದ ಕುಂಬಾರ ಬಾವಿ ಹತ್ತಿರ ಈ ಅವಘಡ ಸಂಭವಿಸಿದ್ದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ.
ವಿದ್ಯುತ್ ಪರಿವರ್ತಕ ಬ್ಲಾಸ್ಟ್ ಆದ ಪರಿಣಾಮದಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು, ಸ್ಥಳಕ್ಕೆ ಆಗಮಿಸಿದ ಅಥಣಿ ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




