Sunday, August 10, 2025

Latest Posts

ಪಾಕಿಸ್ತಾನಿ ಭಯೋತ್ಪಾದಕತೆಯ ಇನ್ನೊಂದು ಮುಖ ಬಯಲು : ಒಳಗಿನ ಶತ್ರುಗಳ ವಿರುದ್ಧ ಹೋರಾಡುವುದು ಹೇಗೆ ? : ದುಬೆ

- Advertisement -

ನವದೆಹಲಿ : ಪಹಲ್ಗಾಮ್‌ ಉಗ್ರ ದಾಳಿಯ ಕುರಿತು ಭಾರತದಲ್ಲಿ ಆಕ್ರೋಶ ಹೆಚ್ಚಾಗಿದೆ. ಉಗ್ರರನ್ನು ಮಟ್ಟ ಹಾಕುವಂತೆ ಬಲವಾದ ಪ್ರತೀಕಾರದ ಕೂಗು ಅಧಿಕವಾಗಿದೆ, ಇದಕ್ಕೆ ಪೂರಕವಾಗಿಯೇ ಭಾರತದ ಸೇನೆಯು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದೆ. ಆದರೆ ನಡುವೆಯೇ ಪಾಕಿಸ್ತಾನಿ ಭಯೋತ್ಪಾದನೆಯ ಇನ್ನೊಂದು ಕರಾಳ ಮುಖವನ್ನು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ತೆರೆದಿಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಆಂತರಿಕವಾಗಿ ಪಾಕಿಸ್ತಾನ ತನ್ನ ಹಿಂಬದಿ ಬಾಗಿಲ ಭಯೋತ್ಪಾದನೆ ನಡೆಸುತ್ತಿರುವುದು ಕಂಡು ಬರುತ್ತಿದೆ.

ಪಾಕಿಸ್ತಾನಿಯ ಹೊಸ ಭಯೋತ್ಪಾದನೆ..

ಪ್ರಮುಖವಾಗಿ ಈ ಕುರಿತು ಸ್ಫೋಟಕ ಮಾಹಿತಿ ನೀಡಿರುವ ಸಂಸದ ನಿಶಿಕಾಂತ್‌ ದುಬೆ, ಐದು ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ಮಹಿಳೆಯರು ಭಾರತದಲ್ಲಿ ವಿವಾಹವಾದ ನಂತರ ಇಲ್ಲಿಯೇ ವಾಸಿಸುತ್ತಿದ್ದರು. ಆದರೆ ಅವರಿಗೆ ಭಾರತೀಯ ಪೌರತ್ವ ಸಿಗದ ಕಾರಣ ಪಾಕಿಸ್ತಾನಿ ಭಯೋತ್ಪಾದನೆಯ ಇನ್ನೊಂದು ಮುಖ ದೇಶದಲ್ಲಿ ಕಾಣಿಸಿಕೊಂಡಿದೆ. “ಪಾಕಿಸ್ತಾನಿ ಭಯೋತ್ಪಾದನೆಯ ಹೊಸ ಮುಖ ಈಗ ಕಾಣಿಸಿಕೊಂಡಿದೆ. 5 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ಮಹಿಳೆಯರು ಮದುವೆಯಾದ ನಂತರ ಭಾರತದಲ್ಲಿ ವಾಸಿಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ ಅವರು ಭಾರತೀಯ ಪೌರತ್ವವನ್ನು ಪಡೆದಿಲ್ಲ. ಒಳಗಿರುವ ಈ ಶತ್ರುಗಳ ವಿರುದ್ಧ ಹೇಗೆ ಹೋರಾಡುವುದು? ಎಂದು ಅವರು ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಎಲ್ಲಾ ಪಾಕಿಸ್ತಾನಿ ನಾಗರಿಕರು ಭಾರತವನ್ನು ತೊರೆಯುವಂತೆ ಭಾರತ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ನಿರಂತರವಾಗಿ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ನುಸುಳುಕೋರರನ್ನು ಹಿಡಿದು ಅವರ ದೇಶಕ್ಕೆ ವಾಪಸ್ ಕಳುಹಿಸುತ್ತಿವೆ. ಈಗ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿರುವ ಟ್ವಟ್ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಅಲ್ಲದೆ ನಿಶಿಕಾಂತ್‌ ದುಬೆ ಅವರ ಟ್ವಿಟ್‌ಗೆ ಬಳಕೆದಾರರು ತರಹೇವಾರಿ ಕಮೆಂಟ್‌ಗಳನ್ನು ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಜನರು ಟ್ವಿಟ್‌ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ.

ಭಾರತೀಯ ಪೌರತ್ವ ರದ್ದುಗೊಳಿಸಿ..

ಆಶಿಶ್ ಆನಂದ್ ಎಂಬ ಬಳಕೆದಾರರು, ಭಾರತ ಸರ್ಕಾರವು ತಕ್ಷಣವೇ ಇಂತಹ ಕಾನೂನನ್ನು ತರಬೇಕು, ಅದು ಯಾವುದೇ ಭಾರತೀಯ ನಾಗರಿಕನು ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ನಾಗರಿಕನನ್ನು ಮದುವೆಯಾದರೆ, ಅವನ ಅಥವಾ ಅವಳ ಭಾರತೀಯ ಪೌರತ್ವವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಅಂತಹ ವಿವಾಹಗಳು ಹೆಚ್ಚಾಗಿ ಭಾರತ ವಿರೋಧಿ ಕೃತ್ಯಗಳಿಗೆ ಭಾವನಾತ್ಮಕ, ಮೃದು ವೇದಿಕೆಗಳಾಗುತ್ತವೆ. ಅಲ್ಲದೆ ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ನಮಗೆ ರಾಷ್ಟ್ರ ಮೊದಲು ಬಳಿಕ ಸಂಬಂಧಗಳು ಎಂದು ಆಶಿಶ್ ಹೇಳಿದ್ದಾರೆ.

ದೆಹಲಿಯೊಂದರಲ್ಲೇ 5 ಸಾವಿರ ಪಾಕಿಗಳು..!

ಸಂದೀಪ್ ಶರ್ಮಾ ಎಂಬ‌ ಇನ್ನೋರ್ವ ಬಳಕೆದಾರರು ಬಿಜೆಪಿ ಸಂಸದರ ಪೋಸ್ಟ್ ಅನ್ನು ಪ್ರಶ್ನಿಸಿದ್ದಾರೆ, ಸರ್, ನೀವು ಅಧಿಕಾರದಲ್ಲಿದ್ದೀರಿ, ಕಳೆದ 11 ವರ್ಷಗಳಿಂದ ನೀವು ಈ ಜನರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ? ಕ್ರಮ ಕೈಗೊಂಡರೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುತ್ತದೆ. ಈಗ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಲೆಬಾಗಬಾರದು ಮತ್ತು ನೆರೆಯ ಇಸ್ಲಾಮಿಕ್ ರಾಷ್ಟ್ರಗಳ ಅಕ್ರಮ ನಾಗರಿಕರಿಗೆ ಪಾಠ ಕಲಿಸಬೇಕಾದ ಸಮಯ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಏಪ್ರಿಲ್ 29 ರೊಳಗೆ ಎಲ್ಲಾ ಪಾಕಿಸ್ತಾನಿ ನಾಗರಿಕರು ಭಾರತವನ್ನು ತೊರೆಯದಿದ್ದರೆ, ಅವರನ್ನು ಬಂಧಿಸಲಾಗುವುದು ಎಂದು ಭಾರತ ಸರ್ಕಾರ ಆದೇಶಿಸಿರುವುದು ಗಮನಾರ್ಹ. ಇವರೆಲ್ಲರೂ 3 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ 5000 ಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರು ವಾಸಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಕೇಂದ್ರ ಗುಪ್ತಚರ ಇಲಾಖೆಗೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ.

- Advertisement -

Latest Posts

Don't Miss