- Advertisement -
ಬೆಂಗಳೂರು(ಫೆ.20): ಕನ್ನಡ ಸಾಹಿತ್ಯ ಪರಿಷತ್ 2021 ನೇ ಸಾಲಿನ 49 ವಿಭಾಗಗಳಲ್ಲಿ ನಾನಾ ದತ್ತಿ ಪ್ರಶಸ್ತಿಗಾಗಿ 53 ಕೃತಿಗಳನ್ನು ಆಯ್ಕೆ ಮಾಡಿದೆ. 2012 ರ ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು 2021 ನೇಸಾಲಿನ ನಾನಾ ದತ್ತಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ನೇತೃತ್ವದ ಸಮಿತಿಯು ದತ್ತಿ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಿದೆ.
ಮಾ.12 ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ. ಈ ದತ್ತಿ ಪ್ರಶಸ್ತಿಗಳು ಕನಿಷ್ಠ 250 ರುಪಾಯಿಗಳನ್ನು ಒಳಗೊಂಡಿದ್ದು, ಗರಿಷ್ಠ 10 ಸಾವಿರ ರುಪಾಯಿಗಳನ್ನು ಒಳಗೊಂಡಿದ್ದು, ಸಾಹಿತ್ಯ ಪ್ರೀಯರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
- Advertisement -