Saturday, January 11, 2025

Latest Posts

Love story : ಹೊಸ ದಾಖಲೆ ನಿರ್ಮಿಸಲು ಹೊರಟ ಸಂಜು: 55 ನಿಮಿಷದ ಒಂದು ಪ್ರೇಮಕಥೆ

- Advertisement -

Film News: Proudly present ರಂಗ ಪಯಣ : ಬೆಳ್ಳಿತೆರೆಯಲ್ಲಿ ಬಾದ್ ಷಾ ಶಂಕರ್ ನಾಗ್ ರವರ ಬಂಗಾರದ ನೆನಪುಗಳನ್ನು ರಂಗ ಭೂಮಿಯಲ್ಲಿ ನಿರಂತರವಾಗಿ ಕಾಪಿಟ್ಟುಕೊಳ್ಳುವ ಕಾಯಕ ರಂಗಪಯಣ ತಂಡದ್ದು , ಬೆಳ್ಳಿತೆರೆಯ ಮೇಲೆ ನಾಯಕನಾಗುವ ಕನಸನ್ನು ಕಂಡಿದ್ದ ನಟನೊಬ್ಬನ ಪ್ರೇಮಕಥೆ. 

 

ನಾಯಕನಾಗ ಬಯಸಿದ್ದ ಜೂನಿಯರ್ ಆರ್ಟಿಸ್ಟ್ ಆದ ಕಥೆ.  ತನ್ನ ಇಡೀ ಜೀವನದ ಅಮೂಲ್ಯ ಕ್ಷಣಗಳನ್ನು ಮತ್ತು ತನ್ನ ಪ್ರೇಮಕಥೆಯನ್ನು ಸ್ವಾರಸ್ಯಕರ ರೀತಿಯಲ್ಲಿ ಬಿಚ್ಚಿಡುತ್ತಾ ಹೋಗುತ್ತಾನೆ.

ಕಾಲೇಜಿನ ದಿನದಲ್ಲಿ ಸಿಕ್ಕ ಪ್ರೀತಿ ತನ್ನ ಪ್ರೀತಿಯ ತೆಕ್ಕೆಯಿಂದ ಕೈಜಾರಿದಾಗ ಅವಳನ್ನು ಹುಡುಕಲು ಹೊರಡುತ್ತಾನೆ. ತನ್ನ ತಾಯಿ ತಂದೆ ಪ್ರೀತಿ ಮತ್ತು ಸಿನಿಮಾ 4 ದಿಕ್ಕುಗಳ ಕಥೆಯನ್ನು ಒಟ್ಟೊಟ್ಟಾಗಿ ಹಾಸ್ಯದ ಲೇಪನದೊಂದಿಗೆ ಹೇಳ ಹೊರಟ ಸಂಜು ವಿನ ಕಥೆ. ಅದೇ 55 ನಿಮಿಷದ ಒಂದು ಪ್ರೇಮ ಕಥೆ.

ಜೀವನದ 10 ಅಮೂಲ್ಯ ಬಾಗಿಲುಗಳನ್ನು ಬಡಿದಾಗ ಯಾವ ಬಾಗಿಲು ತೆರೆದಾಗ ತನ್ನ ಪ್ರೇಯಸಿ ಸಿಗುತ್ತಾಳೆ ಎಂಬ ಕುತೂಹಲದ ಹಂದರವೇ 55 ನಿಮಿಷದ ಒಂದು ಪ್ರೇಮ ಕಥೆ.

2015ರಲ್ಲಿ ಲಿಮ್ಕಾ ದಾಖಲೆ ನಿರ್ಮಿಸಿದ ನಾಟಕ ಇಡೀ ಕರ್ನಾಟಕದ 31 ಜಿಲ್ಲೆಗಳಲ್ಲಿ ಒಂದೇ ದಿನ ಪ್ರಯೋಗ ಗೊಳ್ಳುವ ಮುಖೇನ ದಾಪುಗಾಲಿಡಲು ಸಿದ್ಧವಾಗಿದೆ. ಮತ್ತೊಮ್ಮೆ ರಂಗಭೂಮಿಯಲ್ಲಿ 2ನೇ ಬಾರಿ ಲಿಮ್ಕಾ ದಾಖಲೆ ಬರೆಯುವ ಪ್ರಯತ್ನಕ್ಕೆ ಇಳಿದಿದೆ.

Dhananjay: ‘ಅಪರೂಪ’ ಸಿನಿಮಾದ ಟ್ರೇಲರ್ ರಿಲೀಸ್..ಹೊಸಬರಿಗೆ ಡಾಲಿ ಧನಂಜಯ್ ಸಾಥ್..

sudeep: ಕಿಚ್ಚನ ಕಿಚ್ಚು ನಿರ್ಮಾಪಕರ ಮೇಲ್ಯಾಕೆ..?!

Film news: “ಸಂತೋಷ ಸಂಗೀತ” ಸದ್ಯದಲ್ಲೇ ತೆರೆಗೆ

 

- Advertisement -

Latest Posts

Don't Miss