Monday, December 23, 2024

Latest Posts

ನಿಯಂತ್ರಣ ತಪ್ಪಿದ ಇಲೆಕ್ಟ್ರಿಕ್ ಬಸ್, 6 ಮಂದಿಯ ದುರ್ಮರಣ, 12 ಮಂದಿಗೆ ಗಾಯ…

- Advertisement -

ಕಾನ್ಪುರದಲ್ಲಿ ಇಂದು ಬೆಳಿಗ್ಗೆ ಇಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ, ಪಕ್ಕದಲ್ಲಿ ನಿಂತಿದ್ದವರ ಮೇಲೆ ಬಿದ್ದಿದ್ದು, ಘಟನೆಯಲ್ಲಿ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ಮಂದಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಟ್ ಮಿಲ್ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಬಸ್, ಪಕ್ಕದಲ್ಲಿ ನಿಂತವರಿಗೆ ಮತ್ತು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂರು ಕಾರುಗಳು ಮತ್ತು ಹಲವು ಬೈಕ್‌ಗಳು ಧ್ವಂಸಗೊಂಡಿದೆ. ಇನ್ನು ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದು, ಘಟನೆ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ಆತನನ್ನು ಹುಡುಕುವ ಪ್ರಯತ್ನ ನಡೆದಿದೆ ಎಂದು ಪೂರ್ವ ಕಾನ್ಪುರದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಈ ಬಗ್ಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಟ್ವೀಟ್ ಮಾಡುವ ಮೂಲಕ, ಸಂತಾಪ ಸೂಚಿಸಿದ್ದಾರೆ. ಕಾನ್ಪುರ್ ಬಸ್ ಅಪಘಾತದಲ್ಲಿ ತೀವ್ರ ಸಾವು ನೋವು ಆದ ಘಟನೆ ಕೇಳಿ ತೀವ್ರ ದುಃಖವಾಗುತ್ತಿದೆ. ಈ ಘಟನೆಯಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು ಶಕ್ತಿ ಭರಿಸಲಿ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.

- Advertisement -

Latest Posts

Don't Miss