BREAKING NEWS: ಕಲಬುರಗಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಬಸ್, 8 ಜನರ ಸಜೀವ ದಹನ‌

ಕಲಬುರಗಿ: ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದಲ್ಲಿ ಇಂದು ಮುಂಜಾನೆ ಸಂಭವಿಸಿದಂತ ಭೀಕರ ರಸ್ತೆ ಅಪಘಾತದಲ್ಲಿ, ಖಾಸಗಿ ಬಸ್ ಒಂದಕ್ಕೆ ಬೆಂಕಿ ತಗುಲಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಸಂಪೂರ್ಣ ಬಸ್ ವ್ಯಾಪಿಸಿದ ಪರಿಣಾಮ, ಅದರಲ್ಲಿದ್ದಂತ 7 ಪ್ರಯಾಣಿಕರು ಸಜೀವವಾಗಿ ಸುಟ್ಟು ಭಸ್ಮವಾಗಿರೋ ಭೀಕರ ದುರಂತ ಸಂಭವಿಸಿದೆ.

ಗೋವಾದಿಂದ ಹೈದರಾಬಾದ್ ಗೆ ತೆರಳುತ್ತಿದ್ದಂತ ಖಾಸಗಿ ಬಸ್ ಹಾಗೂ ಟೆಂಪೋ ಟ್ರಾಕ್ಸ್ ನಡುವೆ ಕಲಬುರ್ಗಿ ಬಳಿಯ ಕಮಲಾಪುರದಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಿಂದಾಗಿ ಬಸ್ ಉರುಳಿ ಬಿದ್ದ ನಂತ್ರ, ಬೆಂಕಿ ಹೊತ್ತಿಕೊಂಡಿದೆ.

ಬಸ್ ನಲ್ಲಿ 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ 7 ಮಂದಿ ಸಜೀವವಾಗಿ ಧಹಿಸಿ ಹೋಗಿರೋದಾಗಿ ಶಂಕಿಸಲಾಗಿದೆ. ಇನ್ನು 12 ಮಂದಿ ಗಾಯಗೊಂಡಿದ್ದು, ಅವರನ್ನು ಕಲಬುರ್ಗಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಬಸ್ ಅಪಘಾತದ ನಂತ್ರ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿಯುತ್ತಿದ್ದರೇ, ಅವರಲ್ಲಿ ತಮ್ಮವರು ಹೊತ್ತಿ ಉರಿಯುವುದನ್ನು ಕಂಡು ಕುಟುಂಬಸ್ಥರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೆದುರೇ ಸಜೀವವಾಗಿ ದಹನವಾಗುವುದನ್ನು ಕಂಡು ಚೀರಾಟ, ಕೂಗಾಟ ಕೇಳಿ ಬಂದಿತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಪಘಾತಕ್ಕೆ ಬಸ್ ಚಾಲಕನ ಅಜಾಗರೂಕ ಚಾಲನೆಯೇ ಕಾರಣ ಎನ್ನಲಾಗಿದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

About The Author