- Advertisement -
ನವದೆಹಲಿ: ಕೇಂದ್ರ ಸರ್ಕಾರದಿಂದ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ರದ್ದು ಮಾಡೋ ಮೂಲಕ ಬಿಗ್ ಶಾಕ್ ನೀಡಿದೆ.
ಕೇಂದ್ರ ಸರ್ಕಾರದಿಂದ ರೂಪಿಸಿದಂತ ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸಹಾಯಧನ ನೀಡುವುದಾಗಿ ಘೋಷಿಸಿದ್ದು, ಇನ್ನುಳಿದ ಗೃಹ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಸಬ್ಸಿಡಿಯನ್ನು ರದ್ದು ಪಡಿಸಿದೆ. ಹೀಗಾಗಿ ಇನ್ಮುಂದೆ ಗೃಹ ಬಳಕೆಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗೆ ಯಾವುದೇ ಸಬ್ಸಿಡಿ ಸಿಗೋದಿಲ್ಲ.
ಅಂದಹಾಗೇ ಜೂನ್ 2020ರಿಂದಲೂ ಅಡುಗೆ ಅನಿಲಕ್ಕೆ ಯಾವುದೇ ಸಬ್ಸಿಡಿ ಸಿಗುತ್ತಿಲ್ಲ. ಕೇವಲ ಉಜ್ವಲ ಯೋಜನೆಯಡಿ ದೇಶದಲ್ಲಿ ಸಂಪರ್ಕ ಪಡೆದಿರುವಂತ ಸುಮಾರು 9 ಕೋಟಿ ಬಡ ಕುಟುಂಬಗಳಿಗೆ ಮಾತ್ರವೇ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮುಂದುವರೆಸಿದೆ.
- Advertisement -