Monday, October 6, 2025

Latest Posts

ಮನೆ ಕೆಲಸ ಮಾಡಲಿಲ್ಲವೆಂದು ಬಾಲಕಿಯ ಮೇಲೆ ಬಿಸಿ ನೀರು ಸುರಿದಳಾ ಹೆಂಗಸು..?

- Advertisement -

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ 7 ವರ್ಷದ ಬಾಲಕಿ ಮೇಲೆ ಬಿಸಿ ನೀರು ಸುರಿದು, ಸುಡಲು ಪ್ರಯತ್ನಿಸಿದ ಆರೋಪ ಕೇಳಿ ಬಂದಿದೆ. ಮಿದುಲಾ ಎಂಬ ಬಾಲಕಿ ಮೇಲೆ ಬಿಸಿ ನೀರು ಸುರಿದಿದ್ದು, ಈಕೆ ಮನೆಗೆಲಸ ಮಾಡಲಿಲ್ಲವಾದ್ದರಿಂದ ಹೀಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಮಿದುಲಾಳ ಅಪ್ಪ ಕೆಲ ವರ್ಷಗಳ ಹಿಂದೆ ತೀರಿ ಹೋದರು. ತಾಯಿ ಕುವೈತ್‌ನಲ್ಲಿ ಮನೆಗೆಲಸ ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ಆಕೆಯ ಗೆಳತಿ ಯನಮದಲ ಲಕ್ಷ್ಮೀ ಎಂಬಾಕೆಯ ಮನೆಯಲ್ಲಿ ಮಿದುಲಾ ವಾಸಿಸುತ್ತಿದ್ದಳು. ಆದ್ರೆ ಈ ಪುಟ್ಟ ಬಾಲಕಿ ಮನೆಗೆಲಸ ಮಾಡಲಿಲ್ಲವೆಂಬ ಕಾರಣಕ್ಕೆ, ಲಕ್ಷ್ಮೀ ಬಿಸಿ ಬಿಸಿ ನೀರನ್ನು ಆ ಬಾಲಕಿಯ ಮೇಮೈಲೆ ಸುರಿದು, ಆಕೆಯನ್ನು ಸುಡಲು ಪ್ರಯತ್ನಿಸಿದಳೆಂದು ಹೇಳಲಾಗುತ್ತಿದೆ.

ಆದ್ರೆ ಈ ಆರೋಪವನ್ನು ಸುಳ್ಳು ಅಂತ ಹೇಳುತ್ತಿರುವ ಲಕ್ಷ್ಮೀ, ಈ ಹುಡುಗಿ ನಮ್ಮ ಮನೆಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದಳು, ಹಾಗಾಗಿ ಆಕೆಗೆ ಶಿಕ್ಷೆ ನೀಡಲು ಬಿಸಿ ನೀರು ಸುರಿದೆ ಎಂದು ಹೇಳಿದ್ದಾಳೆ. ಇನ್ನು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡ ಬಾಲಕಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

- Advertisement -

Latest Posts

Don't Miss