ಮಡಿಕೇರಿಯ ಕಾಟಕೇರಿ ಗ್ರಾಮದ ಹರಿಮಂದಿರ ವಸತಿ ಶಾಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ 2ನೇ ತರಗತಿಯ 7 ವರ್ಷದ ವಿದ್ಯಾರ್ಥಿ ಪುಷ್ಪಕ್ ಸಜೀವ ದಹನವಾಗಿ ದುರ್ಮರಣ ಹೊಂದಿದ್ದಾನೆ.
ಮಾಹಿತಿಯ ಪ್ರಕಾರ, ಬೆಳಿಗ್ಗೆ 4 ರಿಂದ 5 ಗಂಟೆಯ ವೇಳೆಗೆ ವಸತಿ ಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಎಚ್ಚೆತ್ತಿದ್ದಾರೆ. ಶಾಲೆಯಲ್ಲಿ ಇದ್ದ ಇತರ 53 ವಿದ್ಯಾರ್ಥಿಗಳನ್ನು ತಕ್ಷಣ ಎಬ್ಬಿಸಿ ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಲಾಗಿದೆ. ಆದರೆ ಪುಷ್ಪಕ್ ಮಾತ್ರ ಅವಘಡದ್ದಲ್ಲಿ ಒಳಗೇ ಸಿಲುಕಿಹಾಕಿಕೊಂಡಿದ್ದಾನೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಗ್ಗೆ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲೆಯ ನಿರ್ವಹಣಾ ವ್ಯವಸ್ಥೆಯ ವಿರುದ್ಧ ಆತಂಕ ವ್ಯಕ್ತವಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ತನಿಖೆ ನಂತರ ನಿರೀಕ್ಷಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ

