Thursday, June 13, 2024

Latest Posts

ಟೀಮ್ ಇಂಡಿಯಾದಿಂದ 76ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

- Advertisement -

ಹರಾರೆ: ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಮಾಡಿದೆ.

ಮೂರು ಪಂದ್ಯಗಳ ಏಕದಿನ ಸರಣಿ ಆಡಲಿರುವ ರಾಹುಲ್ ಪಡೆ ಸೋಮವಾರ ಹರಾರೆ ನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಿತು. ಈ ಸಂದರ್ಭದಲ್ಲಿ ತಂಡದ ನಾಯಕ ಕೆ.ಎಲ್. ರಾಹುಲ್, ಉಪ ನಾಯಕ ಶಿಖರ್ ಧವನ್ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಮತ್ತು ಸಹಾಯಕ ಸಿಬ್ಬಂದಿಗಳು ಹಾಜರಿದ್ದು  ತ್ರಿವರ್ಣ `ಧ್ವಜಕ್ಕೆ  ಗೌರವಿಸಿದರು.

ಸಂಭ್ರಮಾಚರಣೆ ಫೋಟೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಸ್ವಾತಂತ್ರ್ಯೋತ್ಸವ ನನ್ನ ಹೃದಯಕ್ಕೆ ತುಂಬ ಹತ್ತಿರವಾಗಿದೆ ಯಾಕಂದ್ರೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅನೇಕರು ದೇಶಾಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರಿಗೆ ಹೃದಯದಿಂದ ಧನ್ಯವಾದ ಹೇಳುತ್ತೇನೆ.

ಅವರಿಂದ ಇಂದು ದೇಶ ಸ್ವತಂತ್ರ ಪಡೆದಿದೆ. ದೇಶ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಲ್ಲರಿಗೂ ಸ್ವತಂತ್ರ ದಿನದ ಶುಭಾಶಯಗಳು ಎಂದು ಉಪನಾಯಕ ಶಿಖರ್ ಧವನ್ ಇನ್‍ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.

- Advertisement -

Latest Posts

Don't Miss