ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ವಿಶಿಷ್ಟ ಸಿನಿಮಾ `777 ಚಾರ್ಲಿ’ ಬಹಳ ಸದ್ದು ಮಾಡುತ್ತಿದೆ. ರಕ್ಷಿತ್ ಇರುವುದು ಒಂದು ಕಡೆಯಾದರೆ, ಈ ಚಿತ್ರದಲ್ಲಿ ಶ್ವಾನದ ಜೊತೆ ಕಥೆ ಹೇಗೆ ಸಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ಟೀಸರ್ ಹಾಗೂ ಟಾರ್ಚರ್ ಹಾಡಿನಿಂದ ಚಾರ್ಲಿ ಗಮನಸೆಳೆಯುತ್ತಿದೆ.
ಮಿಲಿಯನ್ಗಟ್ಟಲೇ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ 777ಚಾರ್ಲಿ ಸಿನಿಮಾದ ಹಾಡುಗಳು ಮತ್ತು ಟೀಸರ್. ಕಳೆದ 3 ವರ್ಷಗಳಿಂದ ಈ ಚಿತ್ರದ ಕೆಲಸಗಳು ನಡೆಯುತ್ತಿದ್ದು ಕಿರಣ್ ರಾಜ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ಎಲ್ಲಾ ಕೆಲಸಗಳು ಮುಗಿದಿದ್ದು ಟೀಸರ್ ಬಿಡುಗಡೆ ಮಾಡಿದ ದಿನವೇ ಚಿತ್ರದ ರಿಲೀಸ್ ಡೇಟ್ ಘೋಷಣೆಮಾಡಲಾಗಿತ್ತು. 2021ರ ಮುಗಿಯುವ ಕೊನೆಯ ದಿನ ಡಿಸೆಂಬರ್ 31ರಂದು ಚಿತ್ರ ತೆರೆಮೇಲೆ ಬರುತ್ತದೆ ಎನ್ನುವ ಖಚಿತ ವಿಷಯವನ್ನು ಸ್ಪಷ್ಟೊಪಡಿಸಿತ್ತು ಚಿತ್ರತಂಡ.
ಆದರೀಗ 777ಚಾರ್ಲಿಯಲ್ಲಿ ಕೆಲಗೊಂದಲಗಳು ಮೂಡಿದ್ದು ಚಿತ್ರದ ರಿಲೀಸ್ ದಿನಾಂಕ ಬದಲಾಗಲಿದೆ ಎನ್ನುವ ಮಾಹಿತಿಗಳು ಹೊರಬಿದ್ದಿವೆ. ಹೌದು ಡಿಸೆಂಬರ್ 31ಕ್ಕೆ ತೆರೆಕಾಣಬೇದ್ದ ಚಾರ್ಲಿ ಸದ್ಯ 31ಕ್ಕೆಚಿತ್ರ ರಿಲೀಸ್ ಮಾಡುತ್ತಿಲ್ಲ, ಇದರ ಕುರಿತು ಮಾತಾಡಿರುವ ಕಿರಣ್ ರಾಜ್, ನಮ್ಮ ನಿರೀಕ್ಷೆಯಂತೆ ಸಿನಿಮಾ ಮೂಡಿಬಂದಿದೆ. ಆದರೆ ಈ ಹಿಂದೆ ಘೋಷಣೆ ಮಾಡಿದಂತೆ ಡಿ.31ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ, ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ, ಕೆಲ ವಿಳಂಬಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಈ ಬಗ್ಗೆ ಸದ್ಯದಲ್ಲೇ ಹೇಳುತ್ತೇವೆ ಎಂದಿದ್ದಾರೆ. ಕಿರಣ್ ರಾಜ್ ನಿರ್ದೇಶನದ ಈ ಚಿತ್ರವು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಆ ಕಾರಣಕ್ಕೆ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿದ್ದಾರೆ ಎಂಬುದು ಸದ್ಯದ ಮಾಹಿತಿ. ಕಿರಣ್ ಅವರ ಈ ಹೊಸ ಪ್ರಯತ್ನ ಯಾವಾಗ ತೆರೆ ಮೇಲೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.