Thursday, July 24, 2025

Latest Posts

79 ಲಕ್ಷ ಹಣ, 1/4 KG ಚಿನ್ನ ಭ್ರಷ್ಟರಿಗೆ ಲೋಕಾ ಶಾಕ್!

- Advertisement -

ಇಂದು ಕರ್ನಾಟಕದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದರು. ಏಕಾಏಕಿ ಕೆಲವು ಭ್ರಷ್ಟ ಅಧಿಕಾರಿಗಳ ಮನೆಗೆ ದಾಳಿ ಮಾಡಿ ಸಾಕಷ್ಟು ಹಣ ಚಿನ್ನ ಕೆಲವೊಂದು ದಾಖಲೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇನ್ನು ಪರಿಶೀಲನೆಗಿಳಿದ ಅಧಿಕಾರಿಗಳಿಗೆ ಕೈ ಇಟ್ಟಲೆಲ್ಲಾ ಕಂತೆ ಕಂತೆ ಹಣ ಪತ್ತೆಯಾಗಿದೆ.

ಇದೇ ರೀತಿ ಕಳೆದ 20 ವರ್ಷಗಳಿಂದ ಕೊಪ್ಪಳ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ & ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕನಾಗಿ ಕಾರ್ಯನಿರ್ವಣೆ ಮಾಡುತ್ತಿದ್ದ ಎಸ್.ಎಂ ಚವ್ಹಾಣ ಅವರ ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದಲ್ಲಿನ ನಿವಾಸಿದ ಮೇಲೆ ದಾಳಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳೇ ಅಲ್ಲಿದ್ದ ಹಣ ಚಿನ್ನ ನೋಡಿ ಶಾಕ್‌ ಆಗಿದ್ದಾರೆ.

ಬುಧವಾರ ಬೆಳಗ್ಗೆಯಿಂದ ಶುರುವಾದ ಶೋಧಕಾರ್ಯ ಸಂಜೆವರೆಗೂ ನಡೆದಿದೆ. ಈ ಶೋಧ ಕಾರ್ಯದಲ್ಲಿ ಎಸ್.ಎಂ ಚವ್ಹಾಣ ಮನೆಯಲ್ಲಿ 52 ಲಕ್ಷ 50 ಸಾವಿರ ನಗದು ಹಣ, 27 ಲಕ್ಷ ಬ್ಯಾಂಕ್ ನಲ್ಲಿರುವ ಹಣ ಸೇರಿ ಒಟ್ಟು 79 ಲಕ್ಷದ 50 ಸಾವಿರ ಹಣ ಸಿಕ್ಕಿದೆ. ಇಷ್ಟೆ ಅಲ್ಲದೆ ಮುಕ್ಕಾಲು ಕೆಜಿ ಚಿನ್ನಾಭರಣ, ನಾಲ್ಕುವರೆ ಕೆಜಿ ಬೆಳ್ಳಿ ಪತ್ತೆಯಾಗಿದೆ. ಕೊಪ್ಪಳದಲ್ಲಿ 13 ಸೈಟ್, 6 ಎಕರೆ ಜಮೀನಿನ ದಾಖಲೆಗಳು ಪತ್ತೆಯಾಗಿದ್ದು ಈಗಾಗಲೇ ಎಲ್ಲವನ್ನು ಲೋಕಾಯುಕ್ತ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

- Advertisement -

Latest Posts

Don't Miss