Sunday, September 8, 2024

Latest Posts

ಒಂದೇ ಗಿಡದಲ್ಲಿ 839 ಟೊಮ್ಯಾಟೋ…!

- Advertisement -

www.karnatakatv.net :ಒಂದೇ ಗಿಡದಲ್ಲಿ ಬರೋಬ್ಬರಿ 839 ಟೊಮ್ಯಾಟೋ ಹಣ್ಣುಗಳನ್ನು ಬೆಳೆದು ಇಂಗ್ಲೆಂಡ್ ನ ವ್ಯಕ್ತಿಯೊಬ್ಬರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ನ ಸ್ಟಾನ್ ಸ್ಟೆಜ್ ಅಬ್ಬೋಟ್ಸ್ ಪ್ರಾಂತ್ಯದ ನಿವಾಸಿ ಡಾಗ್ಲಾಸ್ ಸ್ಮಿತ್ ತನ್ನ ಒಂದು ಗಿಡದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಟೊಮ್ಯಾಟೋ ಬೆಳೆದು ಸುದ್ದಿಯಾಗಿದ್ದಾರೆ. ಈ ಹಿಂದೆ ಒಂದೇ ಗಿಡದಲ್ಲಿ 448 ಟೊಮ್ಯಾಟೋ ಬೆಳೆದಿದ್ದ ಇಂಗ್ಲಂಡ್ ನ ಮತ್ತೊಬ್ಬ ವ್ಯಕ್ತಿಯ ದಾಖಲೆಯನ್ನು ಸ್ಮಿತ್ ಮುರಿದಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಿಂದ ಸ್ಮಿತ್ ವಿಶ್ವದಾಖಲೆ ಮಾಡಲೆಂದೇ ಒಂದೇ ಗಿಡವನ್ನು ಪೋಷಿಸಿದ್ರು. ಗಿಡದ ಪೋಷಣೆಗೆಂದೇ ದಿನಕ್ಕೆ 3-4 ಗಂಟೆಗಳನ್ನು ಮೀಸಲಿಡುತ್ತಿದ್ದರಂತೆ. ಇನ್ನು ಸ್ಮಿತ್ 2020ರಲ್ಲಿ 3 ಕೆಜಿ ನೂರು ಗ್ರಾಮ್ ನಷ್ಟು ತೂಕದ ಒಂದು ಟೊಮ್ಯಾಟೋ ಬೆಳೆಯೋ ಮೂಲಕ  ವಿಶ್ವ ದಾಖಲೆ ಸೃಷ್ಟಿಸಿದ್ರು.

- Advertisement -

Latest Posts

Don't Miss