Monday, September 9, 2024

Latest Posts

Skin :ಪಿಂಪಲ್ ಫ್ರೀಗಾಗಿ ಇಲ್ಲಿದೆ ಸಲ್ಯೂಷನ್

- Advertisement -

ತ್ವಚೆಯ ಬಗ್ಗೆ ಗಂಡಸರಿಗಿಂತ ಹೆಂಗಸರಿಗೆ ಕಾನ್ಶೀಯಸ್ ಜಾಸ್ತಿ. ಅದರಲ್ಲೂ ಮುಖ್ಯವಾಗಿ ಕೆಲವ್ರು, ತಮ್ಮ ಮುಖವನ್ನ ಇನ್ನಷ್ಟು ಅಂದವಾಗಿ ಇಟ್ಕೋಬೇಕು ಅಂತ ಪಾರ್ಲರ್ ಗಳ ಮೊರೆ ಹೋಗ್ತಾರೆ. ಅದ್ರೆ ಮುಖದಲ್ಲಿ ಮೂಡೋ ಪಿಂಪಲ್ಸ್ ಗಳು ಮಹಿಳೆಯರಿಗೆ ಒಂತರದ ಶಾಪ ಇದ್ದಂಗೆ. ಇದಕ್ಕಾಗಿ ಎಷ್ಟೇ ಸರ್ಕಸ್ ಮಾಡಿದ್ರು ಸಹ ಮುಖ ಕೆಲ ದಿನಗಳ ನಂತರ ತನ್ನ ಅಸಲಿ ಬಣ್ಣ ತೋರಿಸುತ್ತೆ. ಕ್ಲಿಯರ್ ಸ್ಕಿನ್ ಪಡಿಯೋದು ಅಂದ್ರೆ ಅದೊಂದು ವರ. ಅದರಲ್ಲೂ ಕೆಲವೊಂದು ಟ್ರಿಕ್ಸ್ ಗಳನ್ನ ಫಾಲೋ ಮಾಡ್ಬೇಕಾಗುತ್ತೆ ಹಾಗಿದ್ರೆ ಆ ಟಿಪ್ಸ್ ಗಳು ಏನು ಅಂತಾ ಗೊತ್ತಾ

 

ಎಲ್ಲರಿಗಿಂತಲೂ ತನ್ನ ಮುಖ ಕ್ಲೀನ್ ಆಂಡ್ ಕ್ಲೀಯರ್ ಆಗಿರಬೇಕು ಅಂತ ಸಾಮಾನ್ಯವಾಗಿ ಎಲ್ಲಾ ಮಹಿಳೆಯರ ಕನಸು.ಆದ್ರೆ ಬದಲಾಗುತ್ತಿರುವ ಜೀವನ ಶೈಲಿಯಿಂದ ಆ ಕನಸು ನನಸಾಗದೇ ಇರಬ್ಹದು.ಮುಖದಿಂದ ಮೊಡವೆಗಳನ್ನು ಒದ್ದು ಒಡಿಸೋಕೆ ಜೀವದಲ್ಲಿ ಕೆಲವೊಂದು ಚೇಂಜಸ್ ಗಳನ್ನು ಮಾಡೋದು ಇಂಪಾರ್ಟೆಂಟ್.

ಅಂದಹಾಗೆ ಪ್ರತಿನಿತ್ಯ 8ರಿಂದ 10 ಲೀಟರ್ ನಷ್ಟು ನೀರನ್ನ ಕುಡಿಯೋದ್ರಿಂದ ಬಹಳಷ್ಟು ಲಾಭವಿದೆ.ಸರಿಯಾಗಿ ನೀರನ್ನ ಕುಡಿಯೋದ್ರಿಂದ ಮುಖ ಕ್ಲೀಯರ್ ಆಗೋದ್ರ ಜೊತೆಗೆ ದೇಹಕಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಅಲ್ಲದೇ ರಾತ್ರಿ ಮಲಗೋ ಮುನ್ನ ತಣ್ಣೀರಿನಲ್ಲಿ ಮುಖ ತೊಳೆದು ಮಲಗೋದ್ರಿಂದ ಮುಖ ಮೊಡವೇ ಫ್ರೀ ಆಗೋ ಜೊತೆಗೆ ಚೆನ್ನಾಗಿ ನಿದ್ದೆ ಕೂಡ ಬರುತ್ತೇ.

 

ಕೆಲಮಹಿಳೆಯರು ತಮ್ಮ ಮುಖದಲ್ಲಿರೋ ಮೊಡವೆಗಳನ್ನು ಹೊಡೆಯೋದು,ಮುಖದಲ್ಲೆಲ್ಲಾ ಸುಮ್ಮನೇ ಕೈ ಆಡಿಸ್ತಾ ಇರೋದನ್ನ ಮಾಡ್ತಾರೆ .ಹೀಗೆ ಮಾಡೋದ್ರಿಂದ ಪಿಂಪಲ್ಸ್ ಗಳು ಹೆಚ್ಚಾಗುವ ಸಾಧ್ಯತೆ ಇದೆ.ಮುಖವನ್ನ ತೊಳೆದ ತಕ್ಷಣವೇ ಟವಲ್ ನಿಂದ ಒರೆಸೋದ್ರಿಂದ ಮುಖದಲ್ಲಿ ಮತ್ತಷ್ಟು ಮೊಡವೆಗಳು ಹುಟ್ಟಿಕೊಳ್ಳುತ್ತೆ.ಅದ್ರಿಂದ ತಪ್ಪಿಸಿಕೊಳ್ಳೋಕೆ ನಿಮ್ಮ ಮುಖವನ್ನ ನಿಧಾನವಾಗಿ ಕೈಯಿಂದಲೇ ಉಜ್ಜೋದು ಉತ್ತಮ.

 

ಹಾಗೇನೇ ನೀವು ಬಳಸೋ ತಲೆದಿಂಬು ಕವರ್ ನ ವಾರಕ್ಕೊಮ್ಮೆ ಚೇಂಜ್ ಮಾಡೋದು ಉತ್ತಮ .ಇಲ್ಲಂದ್ರೆ ಅದರಲ್ಲಿರೋ ಕೊಳಕು ನಿಮ್ಮ ಮುಖ ಹಾಳಅಗುವಂತೆ ಮಾಡುತ್ತೇ.ಈ ರೀತಿ ಸಣ್ಣ ಸಣ್ಣ ಟ್ರಿಕ್ಸ್ ನ ಬಳಸೋ ಮೂಲಕ ನೀವು ನಿಮ್ಮ ಮುಖವನ್ನ ಪಿಂಪಲ್ ಫ್ರೀ ಮಾಡ್ಕೋಬಹುದು.

- Advertisement -

Latest Posts

Don't Miss