Special Story: YouTube ನಲ್ಲಿ 10 ಕೋಟಿ ದುಡಿದ ಬೆನೂರ್ ಬ್ರದರ್ಸ್

Special Story: ನಾವು ಈಗಾಗಲೇ ನಿಮಗೆ ಬೆನೂರ್ ಬ್ರದರ್ಸ್ ಯೂಟ್ಯೂಬ್‌ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿಯೇ, ಕೋಟಿ ಕೋಟಿ ಗಳಿಸಿದ್ದ ವಿಷಯವನ್ನು ಹೇಳಿದ್ದೆವು. ದತ್ತಾ ಬೆನೂರ್ ಯಾವ ರೀತಿ, ಚಿಕ್ಕದಾಗಿ ಫಾರ್ಮಿಂಗ್ ಮಾಡುವ ಜತೆ ಯೂಟ್ಯೂಬ್ ನಲ್ಲಿ ಹಣ ಗಳಿಸಿದ್ದರು ಅಂತಲೂ ನಿಮಗೆ ಹೇಳಿದ್ದೆವು. ಇದೀಗ ನಿಮಗೂ ಯೂಟ್ಯೂಬ್ ಶುರು ಮಾಡಿ, ಚೆನ್ನಾಗಿ ಹಣ ಸಂಪಾದಿಸಬೇಕು ಅಂದ್ರೆ ನೀವೂ ಕೂಡ ಅವರ ಕ್ಲಾಸ್ ಸೇರಬಹುದು. ಹಾಗಾದ್ರೆ ಅವರ ಕ್ಲಾಸ್ ಸೇರಲು ಏನು ಮಾಡಬೇಕು..? ಯೂಟ್ಯೂಬ್ ನಲ್ಲಿ ಹೇಗೆ ಹಣ ಗಳಿಸಬೇಕು ಅಂತಾ ತಿಳಿಯೋಣ ಬನ್ನಿ..

ಭಾರತದಲ್ಲಿ ಹಲವರು ಯೂಟ್ಯೂಬ್ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿ ಮಾಡಿಯೇ, ಕೋಟ್ಯಾಧೀಶ್ವರರಾಗಿದ್ದಾರೆ. ಅಂಥ ಕೋಟ್ಯಾಧೀಶ್ವರ ಯೂಟ್ಯೂಬರ್ಸ್‌ನಲ್ಲಿ ಕರ್ನಾಟಕದ ಬೆನೂರ್ ಬ್ರದರ್ಸ್ ಕೂಡ ಇದ್ದಾರೆ.

ಶ್ರೀರಾಮ್ ಬೆನೂರ್ ಯಾವ ರೀತಿ ನಾವು ಇದರಿಂದ ಹಣ ಗಳಿಸಬೇಕು ಎಂದು ತರಬೇತಿ ನೀಡುತ್ತಿದ್ದಾರೆ. ಶ್ರೀರಾಮ್ ಬೆನೂರ್ ಅವರ ಸಂದರ್ಶನವನ್ನೂ ಕರ್ನಾಟಕ ಟಿವಿ ಮಾಡಿದ್ದು, ಅದರ ವೀಡಿಯೋ ಡಿಸ್ಕ್ರಿಪ್ಶನ್ ಬಾಕ್ಸ್‌ನಲ್ಲಿ ತರಬೇತಿಯ ವೆಬ್‌ಸೈಟ್ ಲಿಂಕ್ ಹಾಕಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನೀವು ಈ ವೀಡಿಯೋ ನೋಡಿ..

About The Author