Wednesday, September 11, 2024

Latest Posts

Haircare:ಕೂದಲ ಆರೈಕೆಗೆ ನೆಲ್ಲಿಕಾಯಿ ದಿ ಬೆಸ್ಟ್

- Advertisement -

ಹೇರ್ ಫಾಲ್ ಹೆಣ್ಮಕ್ಕಳಿಗೆ ಒಂದು ರೀತಿಯ ಸಂಗಾತಿ ಇದ್ದಂಗೆ. ಯಾಕಂದ್ರೆ ಎಷ್ಟೇ ಹೇರ್ ಕೇರ್ ಮಾಡಿದ್ರೂ ಕೂಡ ರಿಸಲ್ಟ್ ಮಾತ್ರ ಝೀರೋ ಆಗಿರುತ್ತೆ. ಹೇರ್ ನ ದಷ್ಟಪುಷ್ಟವಾಗಿಡಲು ನಮ್ ಹೆಣ್ಮಕ್ಕಳು ನಾನಾ ಸರ್ಕಸ್ ಮಾಡಿದ್ರೂ ಸಹ ಹೇರ್ ಫಾಲ್ ನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಅದ್ರಲ್ಲೂ ಪ್ರಗ್ನೆನ್ಸಿ ಟೈಮ್ ಹೆಣ್ಮಕ್ಕಳಲ್ಲಿ ಕೂದಲು ಉದುರುವಿಕೆ ಸರ್ವೇಸಾಮಾನ್ಯ.ಇದಕ್ಕಾಗಿ ಹಲವಾರು ಶ್ಯಾಂಪು, ಕಂಡೀಷನರ್ ಬಳಸ್ತಾರೆ. ಹಾಗಿದ್ರೂ ಅವರ ಕೈ ಹಿಡಿಯೋದು ಮಾತ್ರ ನಮ್ಮ ಸಂಪ್ರಾದಾಯಿಕ ಹಳೆಯ ವಿಧಾನಗಳು.ಅದರಲ್ಲೂ ಮುಖ್ಯವಾಗಿ ನೆಲ್ಲಿಕಾಯಿ. ಇದು ಕೂದಲ ಆರೈಕೆ ಹಾಗೂ ಬೆಳವಣಿಗೆಯಲ್ಲಿ ಎತ್ತಿದ ಕೈ. ಹಾಗಿದ್ರೆನೀವು ನಿಮ್ಮ ಹೇರ್ ಫಾಲ್ ನಿಂದ ತಪ್ಪಿಸಿಕೊಳ್ಳಬೇಕ ಅದು ಹೇಗೆ ಅಂತಾ ತೋರೀಸ್ತೀವಿ

 

 

ತಲೆಗೂದಲ ಆರೈಕೆ ಸದ್ಯ ಮಹಿಳೆಯರಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಕೂದಲಿಗೆ ಅನೇಕ ರೀತಿ ಸ್ಟ್ರೈಟನರ್, ಹೇರ್ ಡ್ರೈಗಳನ್ನ ಬಳಸೋದ್ರಿಂದ ಹೇರ್ ಫಾಲ್ ದಿನೇ ದಿನೇ ಜಾಸ್ತಿಯಾಗುತ್ತೆ. ಕೂದಲ ಬೆಳವಣಿಗೆಯಲ್ಲಿ ನೆಲ್ಲಿಕಾಯಿ ಪರಾಂಪರಗತವಾಗಿ ವಿಶ್ವ ಪ್ರಸಿದ್ಧಿ ಔಷಧಿಯಾಗಿದೆ.ಇದನ್ನ ತಲೆಗೆ ಹಾಕುವುದು ಮಾತ್ರವಲ್ಲದೆ, ನೆಲ್ಲಿಕಾಯಿ ರಸ ಮಾಡಿ ಕುಡಿಯೊದ್ರಿಂದ ಕೂದಲಿಗೆ ಬಹಳಷ್ಟು ಲಾಭವಿದೆ.

ಅಂದಹಾಗೆ ಈ ನೆಲ್ಲಿಕಾಯಿ ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತೆ.ಇದರ ಜೊತಗೆ ನೆಲ್ಲಿಕಾಯಿ ಹೇರ್ ಮಾಸ್ಕ್ ಇತ್ಯಾದಿಗಳಿಂದ ಅನೇಕ ಉಪಯೋಗವಿದೆ. ಶತ ಶತಮಾನಗಳಿಂದಲೂ ನೆಲ್ಲಿಕಾಯಿ ತನ್ನ ಬಳಕೆಯಿಂದಾಗಿ ,ಹಾಗೂ ಅದರ ಆಯುರ್ವೇದಿಕ್ ಗುಣಗಳಿಂದಾಗಿ ವಿಶ್ವದೆಲ್ಲೆಡೆ ಖ್ಯಾತಿಯನ್ನ ಪಡೆದುಕೊಂಡಿದೆ.ವಿಶೇಷವಾಗಿ ನೆಲ್ಲಿಕಾಯಿಯಲ್ಲಿ ವಿಟಮಿನ್‌-ಸಿ ಇರೋದ್ರಿಂದ ಇದು ದೃಷ್ಟಿಗೆ, ಕೂದಲಿಗೆ, ಚರ್ಮಕ್ಕೆ ಬೇಕಾಗಿರುವ ಅಂಶಗಳನ್ನ ನೀಡ್ತದೆ. ಅದರಲ್ಲೂ ಮಧುಮೇಹ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತೇ.ಜೊತೆಗೆ ಖನಿಜಗಳು, ಫೈಟೊಕೆಮಿಕಲ್‌ಗಳನ್ನ ಇಡೀ ದೇಹಕ್ಕೆ ಸರಿಯಾಗಿ ಹಂಚಲು ಸಹಾಯಮಾಡ್ತದೆ.

ನೆಲ್ಲಿಕಾಯಿಯಲ್ಲಿರುವ ವಿಟಮಿನ್‌ ಸಿ ಅಂಶವು ಕೊಲಾಜಿನ್‌ ಉತ್ಪಾದನೆ ಮಾಡುತ್ತಂತೆ. ಹಾಗಾಗಿ ಚರ್ಮದಲ್ಲಿ ಸುಕ್ಕು ಕಡಿಮೆಯಾಗಿ ಸುಂದರ ತ್ವಚೆಯನ್ನು ಹೊಂದಬಹುದು. ಜೊತೆಗೆ ಚರ್ಮದ ಹೊಳಪು ಹೆಚ್ಚಿಸಿ ,ತ್ವಚೆಯನ್ನು ಬಿಗಿ ಮಾಡಿ, ಕಪ್ಪುಕಲೆಗಳನ್ನು ತೆಗೆದು ಹಾಕುತ್ತೆ. ಇದರಿಂದ ನಿಮ್ಮ ತ್ವಚೆ ಕಾಂತಿಯುತವಾಗುತ್ತೆ.
ಇನ್ನು ವಿಶೇಷವಾಗಿ ತಲೆಗೂದಲ ಬೆಳವಣಿಗೆಯಲ್ಲಿ ನೆಲ್ಲಿಕಾಯಿ ಎಣ್ಣೆಗೆ ಪರಾಂಪರಾಗತ ಔಷಧಿ ಎಂಬ ಮನ್ನಣೆ ಇದೆ. ತಲೆಗೆ ಹಾಕುವುದು ಮಾತ್ರವಲ್ಲದೆ,ಇದರ ಆಹಾರ ಸೇವನೆಯಿಂದಲೂ ನಿಮಗೆ ಅನೇಕ ಲಾಭಗಳಿದೆ. ಅಲ್ಲದೇ ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ. ಜೊತೆಗೆ ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳು ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ವಿಟಮಿನ್‌ ಸಿ ನೀಡುತ್ತೆ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸಿದ್ರೆ ನೆಗಡಿ, ಕೆಮ್ಮು, ಜ್ವರದಂಥ ತೊಂದರೆಗಳನ್ನು ದೂರ ಮಾಡಬಹುದು.

 

ಇನ್ನು ನೆಲ್ಲಿಕಾಯಿ ಎಣ್ಣೆಯನ್ನ ಹೇಗೆ ತಯಾರಿಸಬೇಕು ಅಂದ್ರೆ,ಅಗಲವಾದ ಪಾತ್ರೆಯಲ್ಲಿ ಒಂದು ಕಪ್‌ ನೆಲ್ಲಿಕಾಯಿ ಪುಡಿಯೊಂದಿಗೆ ಎರಡು ಕಪ್‌ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ. ಇದನ್ನು ಮಂದವಾದ ಉರಿಯಲ್ಲಿ ಕುದಿಯುವುದಕ್ಕೆ ಬಿಡಬೇಕು. ಸುಮಾರು ೧೦-೧೫ ನಿಮಿಷಗಳ ನಂತರ ತಿಳಿಯಾದ ಹಸಿರು ಬಣ್ಣದ ಎಣ್ಣೆ ಸಿದ್ಧವಾಗುತ್ತದೆ. ಇದನ್ನು ಸೋಸಿ, ಗಾಜಿನ ಬಾಟಲಿಗೆ ತುಂಬಿಟ್ಟುಕೊಳ್ಳಿ. ಈ ನೆಲ್ಲಿಕಾಯಿ ಎಣ್ಣೆಯನ್ನು ನಿಯಮಿತವಾಗಿ ತಲೆಕೂದಲಿಗೆ ಉಪಯೋಗಿಸುವುದರಿಂದ ಆರೋಗ್ಯಕರ ಕೂದಲನ್ನ ನೀವು ಹೊಂದಬಹುದು.

 

ನಾಲ್ಕು ಚಮಚ ನೆಲ್ಲಿಕಾಯಿ ಪುಡಿಯನ್ನು ಅಷ್ಟೇ ಪ್ರಮಾಣದ ಮೊಸರಿನೊಂದಿಗೆ ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ತಲೆಗೂದಲು ಬುಡದಿಂದ ತುದಿಯವರೆಗೆ ಲೇಪಿಸಿಬೇಕು. ಅರ್ಧ ತಾಸಿನ ನಂತರ ಉಗುರು ಬಿಸಿ ನೀರಿನಿಂದ ತಲೆಸ್ನಾನ ಮಾಡಿದರೆ ಆಯ್ತು. ಹಾಗೆಯೇ ಇನ್ನೊಂದು ಬೆಸ್ಟ್ ಹೇರ್‌ ಮಾಸ್ಕ್‌ ಅಂದ್ರೆ- ೪ ಚಮಚ ನೆಲ್ಲಿಕಾಯಿ ಪುಡಿಗೆ ಕಾಲು ಕಪ್‌ ತೆಂಗಿನಕಾಯಿ ಹಾಲು ಸೇರಿಸಿ, ಹದವಾಗಿ ಪೇಸ್ಟ್‌ ತಯಾರಿಸಿಬೇಕು. ಇದನ್ನು ತಲೆಗೆಲ್ಲ ಲೇಪಿಸಿ ಒಂದು ತಾಸು ಹಾಗೆಯೇ ಬಿಟ್ಟು ನಂತರ ಹದ ಬಿಸಿಯ ನೀರಿನಿಂದ ತೊಳೆಯಿರಿ. ಈ ರೀತಿಯ ಹೇರ್ ಮಾಸ್ಕ್ ಮಾಡೋದ್ರಿಂದ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತೆ.

 

- Advertisement -

Latest Posts

Don't Miss