Friday, July 11, 2025

Latest Posts

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

- Advertisement -

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ. ಅಲ್ಲಿ ಬಜ್ಜಿ, ಬೋಂಡಾ, ಹಪ್ಪಳ, ಚಿಪ್ಸ್ ಎಲ್ಲ ಕರಿಯುವುದೇ ತೆಂಗಿನ ಎಣ್ಣೆಯಲ್ಲಿ. ಹಾಗಾದ್ರೆ ತೆಂಗಿನ ಎಣ್ಣೆ ಬಳಕೆಯಿಂದ ಏನೇನು ಲಾಭ..? ಇದನ್ನು ಬಳಸೋದಾದ್ರೂ ಹೇಗೆ ಅಂತಾ ತಿಳಿಯೋಣ ಬನ್ನಿ..

ಕೂದಲು ತುಂಬ ಉದುರುತ್ತಿದೆ, ತುರಿಕೆಯಾಗುತ್ತಿದೆ ಎಂದಲ್ಲಿ, ನೀವು ಬರೀ ತೆಂಗಿನ ಎಣ್ಣೆಯನ್ನೇ ಬಳಸಿ. ಕೂದಲು ಉದುರುವುದು ನಿಂತು, ಆರೋಗ್ಯಕರವಾಗಿ ಬೆಳೆಯುತ್ತದೆ. ತುರಿಗೆ, ಇನ್‌ಫೆಕ್ಷನ್ ಎಲ್ಲವೂ ಕಡಿಮೆಯಾಗುತ್ತದೆ.

ಇನ್ನು ತಿಂಗಳಿಗೆ 1 ಬಾರಿಯಾದರೂ ನೀವು ದೇಹಕ್ಕೆ ತೆಂಗಿನ ಎಣ್ಣೆಯ ಮಾಲೀಶ್ ಮಾಡಿದ್ರೆ, ನಿಮ್ಮ ಸ್ಕಿನ್ ಚೆನ್ನಾಗಿರುತ್ತದೆ. ಆರೋಗ್ಯವಾಗಿಯೂ ಇರುತ್ತೀರಿ. ತುರಿಕೆ, ಕಜ್ಜಿ, ಗಾಯ ಇತ್ಯಾದಿಗಳಿಗೂ ಇರುವ ಹಳೆಯ ಪರಿಹಾರ ಅಂದ್ರೆ ಅದು ತೆಂಗಿನ ಎಣ್ಣೆ. ಗಾಯವಾದ್ರೂ, ಗುಳ್ಳೆಯಾದರೂ, ತುರಿಕೆಯಾದ್ರೂ ತೆಂಗಿನ ಎಣ್ಣೆಯನ್ನೇ ಬಳಸೋದು.

ಇನ್ನು ಕೆಲವರು ತೆಂಗಿನ ಎಣ್ಣೆಯಿಂದ ವಾರಕ್ಕೆ 1 ಬಾರಿ ಬಾಯಿ ಮುಕ್ಕಳಿಸುತ್ತಾರೆ. ಇದರಿಂದ ಹಲ್ಲು ಚೆನ್ನಾಗಿರುತ್ತದೆ. ಹಲ್ಲು ಬಿಳಿಯಾಗುತ್ತದೆ. ಹಲ್ಲು ಹುಳುಕು ಹಿಡಿಯುವುದಿಲ್ಲ.

ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು. ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಅಂದ್ರೆ, ನೀವು ಅಡಿಗೆಯಲ್ಲಿ ತೆಂಗಿನ ಎಣ್ಣೆ ಬಳಸಬೇಕು. ತೆಂಗಿನ ಎಣ್ಣೆ ಮಸಾಜ್‌ನಿಂದ ಕೂದಲು ಮತ್ತು ತ್ವಚೆಯ ಆರೋಗ್ಯ ಚೆನ್ನಾಗಿರುವುದಲ್ಲದೇ, ಆರೋಗ್ಯವೂ ಚೆನ್ನಾಗಿರುತ್ತದೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿಯೇ ತೆಂಗಿನ ಎಣ್ಣೆಯಲ್ಲಿ ಕರಿದ ತಿಂಡಿ, ತೆಂಗಿನ ಎಣ್ಣೆ ಬಳಸಿ ಮಾಡಿದ ಅಡುಗೆ ಸೇವನೆ ಮಾಡಿದವರ ದೇಹದ ತೂಕ ಹೆಚ್ಚಾಗುವುದಿಲ್ಲ. ಏಕೆಂದರೆ ತೂಕವನ್ನು ಮೆಂಟೇನ್ ಮಾಡುವಲ್ಲಿ ತೆಂಗಿನ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ.

ನಿಮಗೆ ತೆಂಗಿನ ಎಣ್ಣೆ ಸೇವನೆ ಮಾಡಿದ್ದಲ್ಲಿ ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಬಳಿಕ ಬಳಸುವುದು ಉತ್ತಮ.

- Advertisement -

Latest Posts

Don't Miss